ಬಾಲು : ಪಕ್ಕದ ಮನೆ ಗೀತಾ ಗೆ ಇಂಗ್ಲಿಷ್ ಬರಲ್ಲ ಕಣೋ…
ಜಗ್ಗು: ನಿನಗೆ ಹೇಗೆ ಗೊತ್ತಾಯ್ತು ?
ಬಾಲು: ಗೀತಾ ನಿನಗೊಂದು ಕಿಸ್ ಕೊಡ್ಲಾ ಅಂದೆ, ಕೆನ್ನೆಗೆ ಹೊಡೆದ್ಲು….!
****
ಮಗ : ನಾನು ಕ್ಲಾಸಲ್ಲಿ ಮಾತಾಡಲ್ಲ ನನ್ನ ಪಾಡಿಗೆ ನಾನು ಕುಳಿತಿರ್ತೀನಿ ಆದರೂ ನಮ್ಮ ಮೇಷ್ಟ್ರು ನನ್ನ ಬೈತಾ ಇರ್ತಾರೆ..
ತಂದೆ : ಕಾರಣ ಬೇಕಲ್ಲ?
ಮಗ : ಗೊತ್ತಿಲ್ಲ ನನ್ನ ನಿದ್ದೆ ಇಂದ ಎಬ್ಬಿಸಿ ಕ್ಲಾಸಲ್ಲೇ ಬೈತಾರೆ..
*****
ತತ್ವಜ್ಞಾನಿ :ಎಲ್ಲ ಬಂಧು ಬಾಂಧವರನ್ನು ಕಳೆದುಕೊಳ್ಳುವುದೆಂದರೆ ನಿಜಕ್ಕೂ ಗೋರಕಠಿಣವಾದದ್ದು..
ಬಡ್ಡಿವ್ಯಾಪಾರಿ : ಕಠಿಣವಾದದ್ದೆ? ಆದರೆ ನಿಜಕ್ಕೂ ಅಸಾಧ್ಯವಾದದ್ದು
****
ಬಾಸ್ : ಏನ್ರೀ ಅರ್ಜೆಂಟಾಗಿ ಟೈಪ್ ಮಾಡಿಕೊಂಡು ಬನ್ನಿ ಅಂದ್ರೆ ಇಷ್ಟೊಂದು ತಪ್ ಮಾಡಿದ್ದಿರಾ?
ನಳಿನಿ, :ನೀವು ಅರ್ಜೆಂಟಾಗಿ ಅಂತ ಮಾತ್ರ ಹೇಳಿದ್ರಿ, ತಪ್ಪಿಲ್ಲದೆ ಅಂತ ಹೇಳಿ ಇಲ್ವಲ್ಲಾ ಸರ್
*****
ಹೆಂಡ್ತಿ : ರೀ ಈ ಗಂಡಸರು ಎಲ್ಲ ಜವಾಬ್ದಾರಿಗು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳೋಕೆ ಮೂರು ಕಾರಣ ಕೊಡಿ…
ಗಂಡ : ಮೂರು ಕಾರಣಕ್ಕೆ ಒಂದೇ ಕಾರಣ ಸಾಕು.
ಹೆಂಡ್ತಿ : ಏನದು ಒಂದೇ ಕಾರಣ ನಿನ್ನಂತವಳನ್ನು ಮದುವೆಯಾದರೆ ಆತ್ಮಹತ್ಯೆನೇ ಗತಿ ಅನ್ನೋ ಕಾರಣ