ಶಂಕರ : ಎರಡು ಕಾದಂಬರಿ ಬರೆದದ್ದಕ್ಕೆ ನಿನಗೆ ಅಷ್ಟು ದೊಡ್ಡ ಸನ್ಮಾನ ಮಾಡಿಬಿಟ್ರಾ!?
ಲೇಖಕ: ಹೌದು ನನ್ನ ಕಾದಂಬರಿ ಅಂದ್ರೆ ಜನ ಹುಚ್ಚೆದ್ದು ಕೊಂಡುಕೊಳ್ಳುತ್ತಾರೆ.
ಶಂಕರ : ಅದು ಹಾಗಲ್ಲ ಹುಚ್ಚೆದ್ದು ಕೊಂಡ್ಕೊಂಡಿದ್ದಕ್ಕಿಂತ ಕೊಂಡುಕೊಂಡು ಓದಿ ಹುಚ್ಚಾದವರೆ ಹೆಚ್ಚು.
****
ಟೀಚರ್ : ರಾಮು 50 ವರ್ಷದ ಹಿಂದೆ ಇಲ್ಲದೇ ಇದ್ದ ಯಾವುದಾದರೂ ಪ್ರಮುಖ ವಸ್ತುವನ್ನು ಹೆಸರಿಸಿ.
ರಾಮ : ನಾನೇ
****
ಶೀಲಾ : “ನಮ್ಮ ಯಜಮಾನ್ರು ತರಕಾರಿ ತರಲು ಹೋದವರು ಎರಡು ದಿನಗಳಾದರೂ ಮನೆಗೆ ಬಂದಿಲ್ಲ?”
ಮಾಲಾ :ಅ ಯ್ಯೋ ನೀವು ಏನ್ ಮಾಡ್ಬಿಟ್ರಿ.
ಶೀಲಾ : ಮಾಡುವುದೇನು ಗೊಡ್ಡು ಸಾರು ಮಾಡಿ ಊಟ ಮಾಡಿದೆ
*****
ನ್ಯಾಯಾಧೀಶರು: ಏನಯ್ಯ ಸುಬ್ಬರಾವ್, ನಿನ್ನ ಪತ್ನಿಯನ್ನು ನೀನು ಅಷ್ಟು ಗಾಢವಾಗಿ ಪ್ರೀತಿಸ್ತಾ ಇದ್ದೋನು ಒಮ್ಮೆಲೆ ಅವಳನ್ನ ಕೊಲೆ ಮಾಡಿಬಿಡೋದೇ!?
ಸುಬ್ಬರಾವ್ : ಮತ್ತಿನ್ನೇನು, ಎದುರು ಮನೆ ಬೋಲೋ ರಾವ್ ನನ್ನು ಅವಳು ಅಷ್ಟೇ ಗಾಢವಾಗಿ ಪ್ರೀತಿಸಿ ಬಿಡುವುದೇ