ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಟೀಚರ್ : ಪ್ರಪಂಚದಲ್ಲಿ ಅತ್ಯಂತ ಹಳೆಯ ಪ್ರಾಣಿ ಯಾವುದು?

ಬಾಲು : ಜೀಬ್ರಾ ಟೀಚರ್ ಟೀಚರ್ : ಅದು ಹೇಗೋ?

ಬಾಲು : ಯಾಕಂದರೆ ಅದರ ಬಣ್ಣ ಈಗಲೂ ಕಪ್ಪು ಬಿಳುಪು……

***

ನ್ಯಾಯಾಧೀಶ : ನೀನು ನನ್ನ ಹೆಂಡತಿನ ಕೊಲೆ ಮಾಡಿಲ್ಲ ಅನ್ನೋದಕ್ಕೆ ಏನಾದರೂ ಸಾಕ್ಷ ಒದಗಿಸಬಲ್ಲೆಯ, ನ್ಯಾಯಾಧೀಶರು ಕೇಳಿದರು.

ಆಪಾದಿತ : ಖಂಡಿತ ಮಹಾಸ್ವಾಮಿ ನನಗೆ ಮದುವೆನೇ ಆಗಿಲ್ಲ…

***

ವರದಿಗಾರ : ನಿಮ್ಮ ಸಿನಿಮಾಗೆ ʼಅತ್ತೆಯೇ ಮಹಾಲಕ್ಷ್ಮಿʼ ಅಂತ ಯಾಕೆ ಹೆಸರು ಇಟ್ಟಿದ್ದು?

ಡೈರೆಕ್ಟರ್ : ಚಿತ್ರಕ್ಕೆ ಪೂರ್ತಿ ಫೈನಾನ್ಸ್ ಅವರದೇ ಅವರಿಗೆ ಖುಷಿಯಾಗಲಿ ಅಂತ ಇಟ್ಟೆ.

ವರದಿಗಾರ : ಚಿತ್ರ ತೋಪಾದ್ರೆ ?

ಡೈರೆಕ್ಟರ್ : ಹೆಸರಿನಿಂದ ಚಿತ್ರ ಓಡಲಿಲ್ಲ ಅಂತ ಸೋಲನ್ನು ಅತ್ತೆಯವರ ತಲೆಗೆ ಕಟ್ಟಿ ಕೈ ತೊಳ್ಕೊಬೋದು!

***

ಗಾಯತ್ರಿ: ನಿನಗೇ ನಿಮ್ಮ ಯಜಮಾನರನ್ನ ಕಂಡ್ರೆ ಅಯ್ಯೋ ಪಾಪ ಅನ್ಸುತ್ತೆ.

ಸುಧಾ : ಒಂದೊಂದು ಸಾರಿ ಅನ್ಸುತ್ತೆ.

ಗಾಯತ್ರಿ : ಒಂದೊಂದು ಸಾರಿ ಅಂದ್ರೆ ಯಾವಾಗ ?

ಸುಧಾ : ಮನೆಗೆ ಯಾರನ್ನಾದರೂ ಊಟಕ್ಕೆ ಕರೆದಾಗ ಆಫೀಸ್ ಮುಗಿಸಿಕೊಂಡು ಬಂದು ಅವರೇ ಅಡಿಗೆ ಮಾಡಬೇಕಾಗುತ್ತಲ್ಲ, ಆಗ.