ಡಾಕ್ಟರ್ : ಏನ್ರೀ ಇದು ನಿಮ್ಮುಖ ಎಷ್ಟು ಡ್ಯಾಮೇಜಾಗಿದೆ
ರಾಜು : ಅದು ಸೊಳ್ಳೆ ಕಡಿದು ಹಾಗಾಗಿದೆ ಡಾಕ್ಟ್ರೇ.
ಡಾಕ್ಟರ್: ಒಂದು ಚಿಕ್ಕ ಸೊಳ್ಳೆ ಕಡುದ್ರೆ ಇಷ್ಟು ಗಾಯವಾಗುತ್ತಾ
ರಾಜು : ನನ್ನ ಮುಖದ್ಮೇಲೆ ಸೊಳ್ಳೆ ಕೂತಿತ್ತು. ಅದನ್ನ ಸಾಯ್ಸೋಕೆ ನನ್ನ ಹೆಂಡ್ತಿ ಸೌಟಿನಲ್ಲಿ ಹೊಡೆದ್ಲು.
***
ತಂದೆ: ರಾಜು,ಪರೀಕ್ಷೆ ಆಯ್ತೇನೋ? ಆಯ್ತು ಕಣಪ್ಪ.
ತಂದೆ : ಎಷ್ಟು ಪ್ರಶ್ನೆ ಕೇಳಿದ್ರು?
ರಾಜು : ಐದು ಪ್ರಶ್ನೆ ಕೇಳಿದ್ರು.
ತಂದೆ,: ನೀನು ಎಷ್ಟು ಪ್ರಶ್ನೆಗೆ ಉತ್ತರಿಸಲಿಲ್ಲ?
ರಾಜು : ಮೊದಲ ಮೂರು ಪ್ರಶ್ನೆ ಕೊನೆಯ ಎರಡು ಪ್ರಶ್ನೆಗೆ ಉತ್ತರಿಸಲಿಲ್ಲ ಅಷ್ಟೇ.
***
ಬಾಸ್: ರಾಜು, ನಿನಗೆ ಕೆಲಸದಲ್ಲಿರುವ ಆ ಶಕ್ತಿ ಕಂಡು ತುಂಬಾ ಸಂತೋಷವಾಯ್ತು ಸಂಜೆಯಾದ್ರೂ ಮನೆಗೆ ಹೋಗ್ತಾ ಇಲ್ಲಾ, ಏನ್ ಕೆಲ್ಸಾ ಮಾಡ್ತಾ ಇದ್ದೀಯ?
ರಾಜು : ಸರ್ ಕೀಬೋರ್ಡಿನಲ್ಲಿ ಅಕ್ಷರಗಳು ಆಲ್ಫಾ ಬೆಟ್ ಪ್ರಕಾರ ಇರಲಿಲ್ಲ. ಅದನ್ನೆಲ್ಲಾ ಕಿತ್ತು ಸರಿಯಾಗಿ ಜೋಡಿಸ್ತಾ ಇದ್ದೀನಿ.














