ಮನೆ ರಾಷ್ಟ್ರೀಯ ಸಚಿವ ಸತ್ಯೇಂದ್ರ ಜೈನ್‌ ನ್ಯಾಯಾಂಗ ಬಂಧನ 2 ವಾರ ವಿಸ್ತರಣೆ

ಸಚಿವ ಸತ್ಯೇಂದ್ರ ಜೈನ್‌ ನ್ಯಾಯಾಂಗ ಬಂಧನ 2 ವಾರ ವಿಸ್ತರಣೆ

0

ನವದೆಹಲಿ (New Delhi): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಇನ್ನೂ ಎರಡು ವಾರ ವಿಸ್ತರಿಸಲಾಗಿದೆ.

ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಕೋರಿ ಜಾರಿ ನಿರ್ದೇಶನಾಲಯದ (ಇ.ಡಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ಈ ಆದೇಶ ಹೊರಡಿಸಿದ್ದಾರೆ.

ಜೈನ್ ಅವರನ್ನು ಇಡಿ ಮೇ 30ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿತ್ತು. ಕಳೆದ ವಾರ ಜೈನ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದಿನ ಲೇಖನ3 ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವ ವಕೀಲರಿಗೆ ಕೇರಳ ಸರ್ಕಾರದಿಂದ 3,000 ರೂ. ಮಾಸಿಕ ಭತ್ಯೆ
ಮುಂದಿನ ಲೇಖನರಾಜ್ಯದಲ್ಲಿ 617 ಮಂದಿಗೆ ಕೋವಿಡ್ ಪಾಸಿಟಿವ್