ಮನೆ ಸುದ್ದಿ ಜಾಲ 73ನೇ ಗಣರಾಜ್ಯೋತ್ಸವ: 939 ಪೊಲೀಸ್ ಪದಕ ಘೋಷಣೆ

73ನೇ ಗಣರಾಜ್ಯೋತ್ಸವ: 939 ಪೊಲೀಸ್ ಪದಕ ಘೋಷಣೆ

0

ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಹಾಗೂ ರಾಜ್ಯಗಳ ವಿವಿಧ ಪೊಲೀಸ್ ಪಡೆಗಳ ಸಿಬ್ಬಂದಿಗಳಿಗೆ ಶೌರ್ಯ ಪದಕ, ಸೇವಾ ಪದಕಗಳನ್ನು ಘೋಷಣೆ ಮಾಡಲಾಗಿದ್ದು, ಒಟ್ಟು 939 ಸಿಬ್ಬಂದಿಗಳಿಗೆ ಪದಕಗಳನ್ನು ನೀಡಲಾಗುತ್ತಿದೆ.

ಅದರಲ್ಲಿ ಅತಿ ಹೆಚ್ಚು 115 ಪದಕಗಳನ್ನು ಜಮ್ಮು-ಕಾಶ್ಮೀರ ಪಡೆದಿದ್ದು, ಪದಕಗಳನ್ನು ಪಡೆದ ಸಿಬ್ಬಂದಿಗಳ ಹೆಸರುಗಳನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಗಳನ್ನು ಗುರುತಿಸಿ ಶೌರ್ಯ ಪದಕ, ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ನೀಡಲಾಗುತ್ತಿದೆ.

ಈ ಪೈಕಿ 189 ಶೌರ್ಯ ಪ್ರಶಸ್ತಿಗಳನ್ನು ನೀಡಲಾಗಿದ್ದರೆ, ಈ ಪೈಕಿ 134 ಮಂದಿಗೆ ಜಮ್ಮು-ಕಾಶ್ಮೀರದಲ್ಲಿ ಶೌರ್ಯ ಸಾಧನೆ ಮಾಡಿದ್ದಕ್ಕಾಗಿ ನೀಡಲಾಗಿದೆ. 47 ಪದಕಗಳನ್ನು ತೀವ್ರಗಾಮಿ ಎಡಪಂಥೀಯ ಪೀಡಿತ ಪ್ರದೇಶಗಳಲ್ಲಿ ಶೌರ್ಯ ಪ್ರದರ್ಶಿಸಿದವರಿಗೆ ನೀಡಲಾಗಿದೆ. ಈಶಾನ್ಯ ರಾಜ್ಯದಲ್ಲಿ ಇದೇ ಮಾದರಿಯ ಕ್ರಮ ಕೈಗೊಂಡ ಓರ್ವ ಸಿಬ್ಬಂದಿಗೆ ಶೌರ್ಯ ಪದಕ ನೀಡಿ ಗೌರವಿಸಲಾಗುತ್ತಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ 30 ಸಿಬ್ಬಂದಿಗಳು, ಚತ್ತೀಸ್ ಗಢದ 10 ಸಿಬ್ಬಂದಿಗಳು, 9 ಒಡಿಶಾ ಪೊಲೀಸ್ ಸಿಬ್ಬಂದಿಗಳಿಗೆ, 7 ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗಳು, ಮೂರು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರಿಗೆ ಶೌರ್ಯ ಪದಕ ಲಭ್ಯವಾಗಿದೆ.

ಹಿಂದಿನ ಲೇಖನರಾಗಿ, ಭತ್ತದ ಬೆಂಬಲ ಬೆಲೆ ಹೆಚ್ಚಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಮುಂದಿನ ಲೇಖನದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು: ರಾತ್ರಿ ವೇಳೆ ಪ್ರಕರಣ ವಿಚಾರಣೆ ನಡೆಸಿ ಇತಿಹಾಸ ಬರೆದ ಕೇರಳ ಹೈಕೋರ್ಟ್