ಮನೆ ಯೋಗಾಸನ ಕೋಕಿಲಾಸನ

ಕೋಕಿಲಾಸನ

0

ಕೋಕಿಲಾಸನಕ್ಕೆ ಕೋಮಲಾಸನವೆಂಬ ಹೆಸರೂ ಇದೆ.

Join Our Whatsapp Group

ಮಾಡುವ ಕ್ರಮ:

1)    ಪ್ರಾರಂಭದಲ್ಲಿ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕು.

2)   ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ  ಬಲತೊಡೆಯ ಮೇಲೂ, ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ ಎಡತೊಡೆಯ ಮೇಲೂ ಇಟ್ಟು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು (ಯೋಗಾಸನ ಕ್ರ. 1ರಲ್ಲಿ ವಿವರಿಸಿರುವಂತೆ).

3)    ಎರಡೂ ಕೈಗಳನ್ನು ಕಟ್ಟಿ ಕಾಲುಗಳ ಮಂಡಿಗಳಿಗೆ ಮೊಳಕೈ ತಗಲುವಂತೆ ನೆಲದಲ್ಲಿ ಊರಬೇಕು.

4)   ಅನಂತರ ಮೊಳಕೈಗಳನ್ನು  ನೆಲದಿಂದ ಮೇಲಕ್ಕೆ ಎತ್ತದೆ ಎಡಗೈಯಿಂದ ಎಡಪಾದವನ್ನೂ, ಬಲಗೈಯಿಂದ ಬಲಪಾದವನ್ನೂ ಹಿಡಿದುಕೊಳ್ಳಬೇಕು. ಆದರೆ ಆಸನದ ಯಾವುದೇ ಸ್ಥಿತಿಯಲ್ಲೂ ಪೃಷ್ಠವನ್ನು ನೆಲದಿಂದ ಮೇಲಕ್ಕೆ ಎತ್ತಬಾರದು.

ಲಾಭಗಳು:

ಕೋಕಿಲಾಸನದ ಅಭ್ಯಾಸದಿಂದ ವಿಶೇಷವಾಗಿ ಆಯಾಸ ಪರಿಹಾರವಾಗುತ್ತದೆ. ಸೊಂಟ, ತೊಡೆ ಹಾಗೂ ಮೀನಖಂಡಗಳ ಅನೇಕ ವಿಕಾರಗಳು ನಿವಾರಣೆಯಾಗುವುವು. ಹೊಟ್ಟೆ ತೆಳ್ಳಗಾಗುವುದು, ಪಚನಶಕ್ತಿ ಹೆಚ್ಚುವುದು, ಮಲಬದ್ಧತೆ ನಿವಾರಣೆಯಾಗುವುದು. ಮೂಳೆ ರೋಗದವರಿಗೆ ಈ ಆಸನ ಹೆಚ್ಚು ಉಪಕಾರಿ.

ಹಿಂದಿನ ಲೇಖನಹಲವಾರು ಆರೋಗ್ಯ ಪ್ರಯೋಜನ ಹೊಂದಿರುವ ಹೆಸರು ಕಾಳು
ಮುಂದಿನ ಲೇಖನಹಾಸ್ಯ