ಮನೆ ಸುದ್ದಿ ಜಾಲ ಕರಾಮುವಿ ಆಡಳಿತ ಮಂಡಳಿ ಸದಸ್ಯರಾಗಿ ಎಂಎಲ್ಸಿ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕಾರ

ಕರಾಮುವಿ ಆಡಳಿತ ಮಂಡಳಿ ಸದಸ್ಯರಾಗಿ ಎಂಎಲ್ಸಿ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕಾರ

0

ಮೈಸೂರು:ಕರ್ನಾಟಕ ಮುಕ್ತವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯರಾಗಿ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ಮುಕ್ತವಿವಿಯ ನಾಮನಿರ್ದೇಶಿತ ಸದಸ್ಯರಾಗಿ ಹೆಚ್. ವಿಶ್ವನಾಥ್ ನೇಮಕವಾಗಿದ್ದು, ಕೆಎಸ್ಓಯು ಕುಲಪತಿಗಳ ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಕುಲಸಚಿವ ರಾಜಣ್ಣ ಅವರ ಸಮ್ಮುಖದಲ್ಲಿ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕಾರ ಮಾಡಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕ ಮುಕ್ತ ವಿವಿ ರಾಜ್ಯದ ಏಕೈಕ ಪ್ರತಿಷ್ಠಿತ ‌ವಿಶ್ವವಿದ್ಯಾಲಯ. ಮೈಸೂರು ವಿವಿ ಮಾಜಿ ಕುಲಪತಿ ರಂಗಪ್ಪ ಕಾಲದಲ್ಲಿ ಅತ್ಯುತ್ತಮವಾಗಿ ಮುಕ್ತವಿವಿ ಕಟ್ಟಡ ನಿರ್ಮಾಣ ಆಗಿದೆ. ಸಾವಿರಾರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಜವಾಬ್ದಾರಿ ಕೆಎಸ್ಓಯು ಮೇಲಿದೆ. ಗ್ರಾಮಾಂತರ ಭಾಗದ ಮಕ್ಕಳಿಗೆ ಕೆಎಸ್ಓಯು ಸಹಕಾರಿಯಾಗಲಿದೆ. ಇದನ್ನ ಮತ್ತಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಮುಕ್ತ ವಿವಿಯ ಕುಲಪತಿಗಳಿಗೆ ಕೋರೊನಾ ಪಾಸಿಟಿವ್ ಆಗಿದೆ. ಹಾಗಾಗಿ ರಿಜಿಸ್ಟರ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರ ಸ್ವೀಕರಿಸಿದ ಬಳಿಕ  ಆಡಳಿತ ಮಂಡಳಿ ಜೊತೆ ಕುಳಿತು ಚರ್ಚೆ ಮಾಡುತ್ತೇನೆ ಎಂದರು.

ಮೇಕೆದಾಟು ಯೋಜನೆಗೆ ಕಾನೂನು ಸಮರ ಆಗಬೇಕು: ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಕುರಿತು ಟೀಕಿಸಿದ ಹೆಚ್.ವಿಶ್ವನಾಥ್, ಮೇಕೆದಾಟು ಯೋಜನೆಗೆ ಪಾದಯಾತ್ರೆ ಸಮರ ಬೇಕಿಲ್ಲ. ಇದಕ್ಕೆ ಕಾನೂನು ಸಮರ ಆಗಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇದರಿಂದ ಏನು ಪ್ರಯೋಜನ ಆಯ್ತು.? ಬಳ್ಳಾರಿ ರೆಡ್ಡಿಗಳಿಗೆ ಸಿದ್ದರಾಮಯ್ಯ ಪಾದಯಾತ್ರೆಯಿಂದ ಶಿಕ್ಷೆ ಆಗಲಿಲ್ಲ. ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಕಾನೂನಿನ ಮೂಲಕ ಶಿಕ್ಷೆ ಆಯ್ತು. 720ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂತು. ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ  ಅವರ ವಿರುದ್ಧ ಯಾವ ಕ್ರಮ ಕೈಗೊಂಡರು ಎಂದು ಕುಟುಕಿದರು.

ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಕಾನೂನು ಹೋರಾಟದ ಮೂಲಕವೇ ಈ ವಿಚಾರ ಬಗೆಹರಿಯಬೇಕು. ಸಿದ್ದರಾಮಯ್ಯ ಕಾನೂನು ಪಂಡಿತರು, ಇದೆಲ್ಲವೂ ಅವರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದೂ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡಿದ್ರು ಅಷ್ಟೇ ಎಂದು ಹೆಚ್.ವಿಶ್ವನಾಥ್ ಹೇಳಿದರು.

  • ಟ್ಯಾಗ್ಗಳು
  • KSOU
ಹಿಂದಿನ ಲೇಖನ10 ವರ್ಷದ ಬಾಲಕಿ ಬಹುಕೋಟಿ ಕಂಪನಿಯ ಒಡತಿ
ಮುಂದಿನ ಲೇಖನಕಠಿಣ ವ್ರತ ಪಾಲಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ನಟ ಅಜಯ್ ದೇವಗನ್