ಮನೆ ಸುದ್ದಿ ಜಾಲ ಭೂಮಾಪನ ಶುಲ್ಕ ಇಳಿಸಿದ ಸರ್ಕಾರ

ಭೂಮಾಪನ ಶುಲ್ಕ ಇಳಿಸಿದ ಸರ್ಕಾರ

0

ಭೂಮಾಪನ, 11-ಇ ನಕ್ಷೆ, ಭೂ ಪರಿವರ್ತನೆ ಮತ್ತು ತತ್ಕಾಲ್ ಪೋಡಿಗೆ ಶುಲ್ಕ ಹೆಚ್ಚಳ ಮಾಡಿದ್ದ ಕಂದಾಯ ಇಲಾಖೆ ಭಾರಿ ವಿರೋಧ ಕೇಳಿ ಬಂದ ನಂತರ ಮತ್ತೊಮ್ಮೆ ಪರಿಷ್ಕರಿಸಿ ಶುಲ್ಕ ಕಡಿಮೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಆಡಳಿತಾತ್ಮಕ ವೆಚ್ಚ ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀ ಕರಿಗೆ ವರ್ಗಾಯಿಸಿರುವ ಕಂದಾಯ ಇಲಾಖೆ, ಭೂಮಾಪನ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿತ್ತು. ಫೆಬ್ರುವರಿ 1ರಿಂದಲೇ ಪರಿಷ್ಕೃತ ದರ ಜಾರಿಯಾಗಿತ್ತು, ಶುಲ್ಕದಲ್ಲಿ ಹತ್ತು ಪಟ್ಟಿನಿಂದ ನೂರು ಪಟ್ಟಿನಷ್ಟು ಏರಿಕೆ ಮಾಡಲಾಗಿತ್ತು. ಆದರೆ ಬಾರಿ ವಿರೋಧ ಕೇಳಿ ಬಂದ ಹಿನ್ನೆಲೆ ಶುಲ್ಕ ಏರಿಕೆಯಲ್ಲಿ ಕೊಂಚ ಇಳಿಕೆ ಮಾಡಿದೆ.
ಎರಡು ಎಕರೆಗೆ ₹1,500 ಹಾಗೂ ಪ್ರತಿ ಎಕರೆಗೆ ₹400 ರಂತೆ ನಿಗದಿ ಮಾಡಿದೆ. ಆದರೆ, ಗರಿಷ್ಠ ಮಿತಿಯನ್ನು ನಿಗದಿ ಮಾಡಿಲ್ಲ.ನಗರ ಪ್ರದೇಶದಲ್ಲಿ ಎರಡು ಎಕರೆವರೆಗೂ ₹2,500 ಮತ್ತು ನಂತರದ ಪ್ರತಿ ಎಕರೆಗೆ ₹1,000 ದಂತೆ ಗರಿಷ್ಠ ₹5,000ದವರೆಗೆ ಶುಲ್ಕ ವಿಧಿಸಲು ಅನುಮತಿ ನೀಡಲಾಗಿತ್ತು. ಪರಿಷ್ಕರಣೆ ಆದೇಶದಲ್ಲಿ ನಗರ ಪ್ರದೇಶದ ಶುಲ್ಕದಲ್ಲಿ ಬದಲಾವಣೆ ಆಗಿಲ್ಲ. ಆದರೆ, ಗರಿಷ್ಠ ಮಿತಿ ಕೈಬಿಡಲಾಗಿದೆ.

ಹಿಂದಿನ ಲೇಖನಕೋರ್ಟ್‌ಗೆ ಹಾಜರಾತಿ: ವಿಜಯ ಮಲ್ಯಗೆ ಸುಪ್ರೀಂ ಕೋರ್ಟ್ ನಿಂದ ಕೊನೆಯ ಅವಕಾಶ
ಮುಂದಿನ ಲೇಖನಮಾದಪ್ಪನ ಸನ್ನಿದಿಯಲ್ಲಿ ಹುಂಡಿ ಎಣಿಕೆ: ೧.೮೭ ಕೋಟಿ ರೂ. ಸಂಗ್ರಹ