ಮನೆ ಮನರಂಜನೆ ನವೆಂಬರ್ 21ರಂದು ಒಟಿಟಿಗೆ ಲಗ್ಗೆ ಇಡಲಿರುವ ಲಿಯೋ

ನವೆಂಬರ್ 21ರಂದು ಒಟಿಟಿಗೆ ಲಗ್ಗೆ ಇಡಲಿರುವ ಲಿಯೋ

0

ದಳಪತಿ ವಿಜಯ್  ಸೌತ್ ಇಂಡಸ್ಟ್ರಿಯ ಟಾಪ್ ಹೀರೋಗಳಲ್ಲಿ ಒಬ್ಬರು. ತಮಿಳಿನಲ್ಲಿ ಮಾತ್ರವಲ್ಲದೆ ಕನ್ನಡ, ತೆಲುಗಿನಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಜಯ್ ಅಭಿನಯದ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಗಳಿಕೆ ಮಾಡುತ್ತವೆ.

ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ‘ವಾರಿಸು’ ಸಿನಿಮಾ ಗೆಲುವು ಕಂಡಿತು. ‘ಲಿಯೋ’ ಸಿನಿಮಾ ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಪಡೆಯಿತಾದರೂ, ಬಾಕ್ಸ್ ಆಫೀಸ್​  ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಒಟಿಟಿ ಪ್ರಸಾರದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

‘ಲಿಯೋ’ ಸಿನಿಮಾ ದಸರಾ ಪ್ರಯುಕ್ತ ಅಕ್ಟೋಬರ್ 19ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿದೆ. ವಿಶ್ವಾದ್ಯಂತ ಈ ಚಿತ್ರ 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಚಿತ್ರದ ಒಟಿಟಿ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಗ್ಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡಿತ್ತು. ನೆಟ್​ ಫ್ಲಿಕ್ಸ್ ಕಡೆಯಿಂದಲೇ ಈ ಬಗ್ಗೆ ಮಾಹಿತಿ ಸಿಕ್ಕಿದೆ.

‘ಲಿಯೋ’ ರಿಲೀಸ್ ಆಗಿ ನಾಲ್ಕು ವಾರಗಳಲ್ಲಿ ಈ ಚಿತ್ರ ಒಟಿಟಿಗೆ ಬರುತ್ತಿದೆ. ಈ ಸಿನಿಮಾ ನವೆಂಬರ್ 16ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ‘ಲಿಯೋ’ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ನೆಟ್​ಫ್ಲಿಕ್ಸ್ ಸ್ಪಷ್ಟತೆ ನೀಡಿದೆ. ನವೆಂಬರ್ 21ರಿಂದ ಚಿತ್ರ ಸ್ಟ್ರೀಮ್ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ನವೆಂಬರ್ ತಿಂಗಳಲ್ಲಿ, ಒಟಿಟಿಯಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳ ಪಟ್ಟಿಯನ್ನು ನೆಟ್​ಫ್ಲಿಕ್ಸ್ ಬಹಿರಂಗಪಡಿಸಿದೆ. ಅದರ ಭಾಗವಾಗಿ ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ಸ್ಟ್ರೀಮಿಂಗ್ ಡೇಟ್ ಕೂಡ ಬಹಿರಂಗವಾಗಿದೆ.

ಹಿಂದಿನ ಲೇಖನಮೈಸೂರು: ಮಳೆ ನೀರು ಚರಂಡಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಕೆ ಹರೀಶ್ ಗೌಡ
ಮುಂದಿನ ಲೇಖನಜೆಡಿಎಸ್​​ ಪಕ್ಷದಿಂದ ಸಿಎಂ ಇಬ್ರಾಹಿಂ ಅಮಾನತು