ಮನೆ ಕಾನೂನು ಪುರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ವಶಕ್ಕೆ

ಪುರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ವಶಕ್ಕೆ

0

ಭಟ್ಕಳ: ಇಲ್ಲಿನ ಪುರಸಭೆ ಕಚೇರಿ ಮೇಲೆ ಶುಕ್ರವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 50 ಸಾವಿರ ಲಂಚ  ಪಡೆಯುತ್ತಿದ್ದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Join Our Whatsapp Group

ಪಟ್ಟಣದ ಕಿದ್ವಾಯಿ ರಸ್ತೆಯಲ್ಲಿರುವ ಹೊಸ ಮನೆಯ ಒಳಚರಂಡಿ ಸಂಪರ್ಕ ಪಡೆಯುವ ಸಲುವಾಗಿ ನಿರಾಕ್ಷೇಪಣೆ ಪತ್ರಕ್ಕಾಗಿ ಮೊಹಮ್ಮದ ಇದ್ರೀಸ್‌ ಎನ್ನುವವರು ಅರ್ಜಿ ಸಲ್ಲಿಸಿದ್ದರು. ನಿರಾಪೇಕ್ಷಣಾ ಪತ್ರ ನೀಡಲು ಮುಖ್ಯಾಧಿಕಾರಿ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದ್ರಿಸ್ ಅಧಿಕಾರಿಗೆ ನೀಡುವ ಹಣವನ್ನು ಮುಖ್ಯಾಧಿಕಾರಿ ಅವರ ವಾಹನ ಚಾಲಕ ಶಂಕರ ನಾಯ್ಕ ಎಂಬುವವರಿಗೆ ನೀಡುವ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ‌.

ಚಾಲಕ ಶಂಕರ ನಾಯ್ಕ ಜತೆಗೆ ಮುಖ್ಯಾಧಿಕಾರಿಯನ್ನೂ  ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಎಸ್.ಪಿ ಕುಮಾರಚಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.