ಮನೆ ಕವನ ನಿಮ್ಮನ್ನು ನೀವೇ ಪ್ರೀತಿಸಿ: ಕವಿತೆ

ನಿಮ್ಮನ್ನು ನೀವೇ ಪ್ರೀತಿಸಿ: ಕವಿತೆ

0

ಎಷ್ಟು ಚೆನ್ನಾಗಿರುತ್ತಲ್ವಾ

ನಮ್ಮನ್ನು ಭೇಟಿಯಾಗಲು ಯಾರೋ ಕಾತರಿಸುವುದು…

ಸುಂದರವಾಗಿ ಆಲಂಕರಿಸಿಕೊಂಡು

ಹಣೆಗೆ ಬೊಟ್ಟು ಇಟ್ಟುಕೊಳ್ಳುವ ಆ ಒಂದು ಕನಸಿರುತ್ತದೆ..

ಆ ವ್ಯಕ್ತಿ ನಮ್ಮನ್ನು

ನಾವು ಹೇಗಿದೀವೋ ಹಾಗೆಯೇ ಸ್ವೀಕರಿಸುವಂತಿರಬೇಕು…

ನಾವು ಸಣ್ಣನೋ ಇಲ್ಲ ದಪ್ಪನೋ

ಕುಳ್ಳ ಇರಬಹುದು ಅಥವಾ ಎತ್ತರವಿರಬಹುದು,

ಅದ್ಯಾವುದು ಮುಖ್ಯವಾಗಬಾರದು..

ಅವನ್ನೆಲ್ಲಾ ಪಕ್ಕಕ್ಕೆ ಸರಿಸಿ,
 ಹಾ ಇರು ಬಂದೆ ಎನ್ನುತ್ತಾ ಬಳಿ ಬರಬೇಕು..

ನಮ್ಮನ್ನು ಸಂಬಾಳಿಸುವ ಆ ವ್ಯಕ್ತಿ

ಖುದ್ದು ನಾವೇ ಆಗಿರುತ್ತೇವೆ ಎಂದು ತಿಳಿದಿರಬೇಕು

ನಮ್ಮನ್ನು ನಾನು ಪ್ರೀತಿಸುವುದು ತಿಳಿದಿರಬೇಕು…

ಎಷ್ಟು ಚಂದ ಅನ್ನಿಸುತ್ತಲ್ವಾ

ನಮ್ಮನ್ನು ನಾವೇ ಕಾಣಲು ಕಾತರಿಸುವುದು…

  • ಮಂಜುಳ ಕಿರುಗಾವಲು