ಮನೆ ಅಪರಾಧ ಮಧುಗಿರಿ ಸಬ್‌ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ‌

ಮಧುಗಿರಿ ಸಬ್‌ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ‌

0

ತುಮಕೂರು: ಜೈಲಿನಲ್ಲಿದ್ದ ತಂದೆಯನ್ನು ನೋಡಲು ಬಂದ  ಮಗನಿಂದ ಲಂಚ ಪಡೆಯುತ್ತಿದ್ದ ಮಧುಗಿರಿ ಸಬ್‌ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತಾ ಬಲೆಗೆ‌ ಬಿದ್ದಿದ್ದಾರೆ.

ಜೈಲ್ ಸೂಪರಿಂಟೆಂಡೆಂಟ್ ದೇವೇಂದ್ರ ಆರ್ ಕೋಣಿ ಲೋಕಾಯುಕ್ತ ಬಲೆಗೆ ಬಿದ್ದವರು.

ಕಳೆದ ಐದು ದಿನಗಳ ಹಿಂದೆ ಶಿರಾ‌ ಪೊಲೀಸ್ ಠಾಣೆ ಯಿಂದ 307 ಕೇಸ್ ಅಡಿ ಆರೋಪಿ ಇಂತಿಯಾಜ್‌ ಜೈಲಿಗೆ ಬಂದಿದ್ದನು. ಇಂತಿಯಾಜ್ ನೋಡಲು ಮಗ ಅರ್ಬಾಜ್ ಬಂದಿದ್ದ. ಪ್ರತಿದಿನ ಜೈಲಿಗೆ ಬರುವಾಗ ಜೈಲ್ ಸೂಪರಿಂಟೆಂಡೆಂಟ್ ಹಣ ಪಡೆಯುತ್ತಿದ್ದು, ಇದುವರೆಗೆ ಹತ್ತು ಸಾವಿರದವರೆಗೂ ದೇವೇಂದ್ರ ಹಣ ಪಡೆದಿದ್ದರು.

ಇಂದು ಉಳಿದ ಐದು ಸಾವಿರ ಹಣ ಪಡೆಯುವಾಗ ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ಗಳಾದ ಮಂಜುನಾಥ್ ಹರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಜೈಲ್ ಸೂಪರಿಂಟೆಂಡೆಂಟ್ ದೇವೆಂದ್ರ ಆರ್ ಕೋಣಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.