ಒಮ್ಮೆ ತಮ್ಮ ಕುಟುಂಬದೊಂದಿಗೆ ವಿ. ಬೆಕ್ ಮನ್ ಪಿಕ್-ನಿಕ್ ಗೆ ಹೊರಟನು. ಅವರ ಗಾಡಿಯಲ್ಲಿ ಇಳಿಜಾರಿದ್ದ ಕಡೆ ನಿಲ್ಲಿಸಲಾಗಿತ್ತು. ಹಠಾತ್ತನೆ ಕಾರು ಚಲಿಸಲಾರಂಭಿಸಿತು. ಅವರ ಮಗ ಗಾಡಿಯ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳಲಿದ್ದ, ಇದನ್ನು ನೋಡಿದ ಕೂಡಲೇ ಅವರು ಭಾರವಾದ ಆ ಕಾರಿನ ಬಂಪರ್ ನ್ನು ಎತ್ತಿ ತಮ್ಮಮಗನನ್ನು ಉಳಿಸಲು ಪ್ರಯತ್ನಿಸಿದರು.
ಪ್ರಶ್ನೆಗಳು :- ಅವರು ತಮ್ಮ ಮಗನನ್ನು ಉಳಿಸಿಕೊಂಡರೆ ? 2. ಈ ಕಥೆಯ ನೀತಿ ಏನು ?
ಉತ್ತರಗಳು :- 1. ಚೆಕ್ ಮನ್ ಕಾರಿನ ಚಕ್ರದಡಿಯಲ್ಲಿ ಜಜ್ಜಿ ಹೋಗುವ ದುರಂತದಿಂದ ಮಗನನ್ನು ಉಳಿಸುವಷ್ಟು ಎತ್ತರಕ್ಕೆ ಕಾರನ್ನು ಮೇಲೆತ್ತಿದ್ದರು.
2. ಈ ಸಂದರ್ಭದಲ್ಲಿ ಲೈಫ್ ಅಂಡ್ ಮೆಡಿಟೇಶನ್ ಎಂಬ ತಮ್ಮ ಪುಸ್ತಕದಲ್ಲಿ ಸ್ವಾಮೀ ಚಿನ್ಮಯಾನಂದರು, ಬರೆದಿರುವ ಕಥೆಯನ್ನು ಹೇಳಲು ಇಷ್ಟಪಡುತ್ತೇನೆ.
“ನಿನ್ನ ಮನೆಗೆ ಬೆಂಕಿ ಹತ್ತಿದೆ ಎಂದು ಹಠಾತ್ತನೆ ಕೇಳುವೆ ಎಂದು ಭಾವಿಸು. ನೀನು ಅಲ್ಲಿಗೆ ಧಾವಿಸಿ ಬರುವೆ ಅಲ್ಲಿ ಇಡೀ ಮನೆವು ಹೊತ್ತಿ ಉರಿಯುತ್ತಿರುತ್ತದೆ. ಅಗ್ನಿಶಾಮಕ ದಳವು ಏನು ಮಾಡಲಾಗದೆ, ಸುಮ್ಮನಿರುತ್ತದೆ. ಆಗ ಮಗುವಿನೊಂದಿಗೆ ಹೆಂಡತಿಯು ಬೆಂಕಿಯಿಂದ ಹೊರಗೆ ಬರುವುದನ್ನು ಕಾಣುವೆ. ಪ್ರಶ್ನಿಸಿದಾಗ ಮಗುವು ಮೇಲಿನ ಕೋಣೆಯಲ್ಲಿ ಮಲಗಿತ್ತು ಎಂದು ಕೇಳಿ ನಿನಗೆ ಆಘಾತವಾಗುತ್ತದೆ. ಆ ಗೊಂದಲದಲ್ಲಿ ಎಲ್ಲರೂ ಅತಿತ್ತ ಓಡಾಡುತ್ತಿದ್ದಾಗ, ತಾಯಿಗೆ ಮಗುವಿನ ನೆನಪು ಬರುತ್ತದೆ. ಅಗ್ನಿಶಾಮಕದಳದ ನುರಿತನೊಬ್ಬ ತನ್ನ 40 ವರ್ಷಗಳ ಅನುಭವದಿಂದ, “ಅಮ್ಮ, ಒಳಗೆ ಹೋಗಲಾಗದು. ಯಾರು ಉಳಿಯಲಾರರು” ಎನ್ನುತ್ತಾರೆ. ಬೆಂಕಿಯಿಂದತುಂಬಿದೆ. ತಾಯಿ ತಕ್ಷಣವೇ ಎಲ್ಲವನ್ನು ಮರೆತೋ ಭಾವೋನ್ಮದದಿಂದ ಒಳಗೆ ನುಗ್ಗುತ್ತಾಳೆ. ಅವಳು ಸುಟ್ಟು ಹೋಗುತ್ತಾಳೆ ಎಂದು ಎಲ್ಲರೂ ಭಾವಿಸುತ್ತಾರೆ.
ಆದರೆ ಅವಳ ಸೀರೆಯು ಬೆಂಕಿಗೆ ತಾಕಿರುವುದಿಲ್ಲ. ಅವಳು ಕೋಣೆಗೆ ಹೋಗುತ್ತಾಳೆ. ಮಗುವಿನನ್ನು ಹೊರತರುತ್ತಾಳೆ. ಈ ಘಟನೆಯಾದ ನಂತರ ಅವಳಿಗೆ ಬೆಂಕಿಯ ಬಳಿ ಹೋಗು ಎಂದು ಹೇಳಿದರೆ ಅವಳು ಭಯವೆನ್ನುತ್ತಾಳೆ. ಅವಳಿಗೆ ಆ ಸಾಮರ್ಥ್ಯವಿರುವುದಿಲ್ಲ. ಮಗುವಿನ ಮೇಲಿನ ಅಪಾರ ಪ್ರೇಮವೂ ಅವಳನ್ನು ಈ ಪವಾಡ ಮಾಡುವಂತೆ ಪ್ರೇರೇಪಿಸಿತು. ಆದರೆ ಇದು ನಿಜವಾಗಿ ಮನುಷ್ಯನ ಸಾಧಾರಣ ಸಮರ್ಥ್ಯವಾದದಲ್ಲಿ ಆಕೆ ದಿನದ 24 ಗಂಟೆ ಕಾಲ ನಾಯಕಿಯಾಗಿರಲಾರಳೇಕೆ ? ಇಲ್ಲ, ಏಕೆಂದರೆ ಅವಳಿಗೆ ಆ ಪ್ರೇರಣಾತ್ಮಕ ಗುರಿಯಾವಾಗಲೂ ಇರುವುದಿಲ್ಲ. ಹೀಗಾಗಿ ಅವಳಿಗೆ ಕ್ಷಣಮಾತ್ರದ ಪರಿಸ್ಥಿತಿಯು ಮಹತ್ತರವಾದ ಪ್ರೇರಣೆ ನೀಡಿತು. ಒಬ್ಬ ಸಾಧಾರಣ ಮನುಷ್ಯನು ಹೇಡಿಯಾಗಿರಬಹುದು. ಆದರೆ ಉನ್ನತ ಗುರಿಯಿಂದ ಅವನನ್ನು ಪ್ರೇರಿಸಲ್ಪಟ್ಟರೆ ಹೊಸ ಶಕ್ತಿ ಮತ್ತು ಚೈತನ್ಯದ ಚಿಲುಮೆಯಾಗಿ ಪವಾಡಗಳನ್ನು ಮಾಡುತ್ತಾನೆ.”