ಮನೆ ರಾಜ್ಯ ನಾಡಗೀತೆಗೆ ಅವಮಾನ: ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ್ ಕಾಕಾಟೆ ವಿರುದ್ಧ ದೂರು

ನಾಡಗೀತೆಗೆ ಅವಮಾನ: ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ್ ಕಾಕಾಟೆ ವಿರುದ್ಧ ದೂರು

0

ಮೈಸೂರು(Mysuru): ರಾಷ್ಟ್ರಕವಿ ಕುವೆಂಪು ಕುರಿತು ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ್ ಕಾಕಾಟೆ ಅವರು ನಾಡಗೀತೆಗೆ ಅಪಮಾನ ಮಾಡಿ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್, ಎ.ರವಿ, ಕೆ.ವಿ. ಮಲ್ಲೇಶ್ ಅವರಿದ್ದ ತಂಡ ನಗರ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ, ಕುವೆಂಪು ಮತ್ತು ನಾಡಗೀತೆಗೆ ಅಪಮಾನ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಹಿಂದಿನ ಲೇಖನಪ್ರವೇಶಾತಿ ಶುಲ್ಕ ಪಾವತಿ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಮುಂದಿನ ಲೇಖನಬಿಜೆಪಿ ಸೇರ್ಪಡೆಗೊಂಡ ಹಾರ್ದಿಕ ಪಟೇಲ್