ಮನೆ ಸುದ್ದಿ ಜಾಲ ಪಾಲೆಸ್ತೇನ್ ನಲ್ಲಿ ಭಾರತದ ರಾಯಭಾರಿ ಅನುಮಾನಸ್ಪದವಾಗಿ ಸಾವು

ಪಾಲೆಸ್ತೇನ್ ನಲ್ಲಿ ಭಾರತದ ರಾಯಭಾರಿ ಅನುಮಾನಸ್ಪದವಾಗಿ ಸಾವು

0

ಪ್ಯಾಲೆಸ್ತೇನ್: ಭಾರತದ ರಾಯಭಾರಿಯಾಗಿದ್ದ ಮುಕುಲ್ ಆರ್ಯ ಅವರು ಪ್ಯಾಲೆಸ್ತೇನ್ ನಲ್ಲಿ  ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಕಚೇರಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಹೇಗೆ ಮೃತಪಟ್ಟರು ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಹೀಗಾಗಿ ಅವರ ಸಾವು ಸಾಕಷ್ಟು ಅನುಮಾನಗಳನ್ನು  ಹುಟ್ಟು ಹಾಕಿದೆ.

ಈ ಸುದ್ದಿ ಬಂದ ತಕ್ಷಣ, ಪ್ಯಾಲೆಸ್ತೇನ್ ಅಧ್ಯಕ್ಷ ಮಹಮೂದ್ ಅಬ್ಬಾಸ್  ಮತ್ತು ಪ್ರಧಾನ ಮಂತ್ರಿ  ಡಾ. ಮುಹಮ್ಮದ್ ಶ್ತಯ್ಯೆ ಅವರು ಆರೋಗ್ಯ ಮತ್ತು ಫೋರೆನ್ಸಿಕ್ ಮೆಡಿಸಿನ್ ಸಚಿವಾಲಯದ  ಜೊತೆಗೆ ಮಾತನಾಡಿದ್ದಾರೆ. ಜೊತೆಗೆ ಎಲ್ಲಾ ಭದ್ರತೆ ನೀಡಿ, ಸಾವಿನ ಕಾರಣದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಮತ್ತು ಸಾರ್ವಜನಿಕ ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಮುಕುಲ್ ನಿನ್ನೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಬೆಳ್ಳಂಬೆಳಗ್ಗೆಯೇ ಅವರ ಶವ ಅವರದ್ದೇ ಕಚೇರಿಯೊಳಗೆ ಪತ್ತೆಯಾಗಿದೆ.

2008ನೇ ಬ್ಯಾಚಿನ ಐಎಫ್ಎಸ್ ಅಧಿಕಾರಿಯಾಗಿದ್ದ ಮುಕುಲ್ ಆರ್ಯ, ಹೊಸದಿಲ್ಲಿಯ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು.

ಜೊತೆಗೆ ಯುನೆಸ್ಕೋ ಭಾರತ ನಿಯೋಗದ ಕಾಯಂ ಸದಸ್ಯರಾಗಿ, ಮಾಸ್ಕೋ, ಕಾಬೂಲ್ ನಲ್ಲಿ ಭಾರತದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಭಾರತೀಯ ವಿದೇಶಾಂಗ ಸೇವೆಗೆ ಸೇರುವ ಮೊದಲು ದಿಲ್ಲಿ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು.

ಇನ್ನು ಘಟನೆ ಬಗ್ಗೆ ಪ್ಯಾಲೆಸ್ತೇನ್ ವಿದೇಶಾಂಗ ಸಚಿವಾಲಯ ಕೂಡ ತೀವ್ರ ಆಘಾತ ವ್ಯಕ್ತಪಡಿಸಿದೆ. ಈ ಘಟನೆ ನಿಜಕ್ಕೂ ಆಘಾತ ಉಂಟು ಮಾಡಿದೆ ಅಂತ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಅಲ್ಲದೇ ಕೂಡಲೇ ಅಧಕಾರಿಗಳನ್ನು ಮುಕುಲ್ ಆರ್ಯ ನಿವಾಸಕ್ಕೆ ಕಳುಹಿಸಿದ್ದು, ಎಲ್ಲ ರೀತಿಯ ಸಹಕಾರವನ್ನು ಅವರ ಕುಟುಂಬಕ್ಕೆ ನೀಡಲು ಸೂಚನೆ ನೀಡಿದ್ದಾರೆ. ಅಲ್ಲದೇ ಮೃತದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.