ಮನೆ ಆರೋಗ್ಯ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಔಷಧಿ ಇಲ್ಲದ ಮದ್ದು!

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಔಷಧಿ ಇಲ್ಲದ ಮದ್ದು!

0

ಅಧಿಕ ರಕ್ತದೊತ್ತಡ ಎನ್ನುವುದು ನಿರ್ಲಕ್ಷ್ಯ ಮಾಡುವಂತಹ ಕಾಯಿಲೆ ಅಲ್ಲ! ಸೈಲೆಂಟಾಗಿ ಅಟ್ಯಾಕ್ ಮಾಡುವ ಈ ಕಾಯಿಲೆ, ಮನುಷ್ಯನ ಆರೋಗ್ಯದಲ್ಲಿ ದೀರ್ಘಕಾಲದ ಸಮಸ್ಯೆಗಳನ್ನು ಉಂಟು ಮಾಡಬಹುದು! ಇದರಿಂದಾಗಿಯೇ ಮಧುಮೇಹ, ಹೃದಯದ ಕಾಯಿಲೆಗಳು, ಪಾರ್ಶ್ವವಾಯುದಂತ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಬರಬಹುದು!

Join Our Whatsapp Group

ಹೀಗಾಗಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ವೈದ್ಯರು ನೀಡಿರುವ ಔಷಧಿ ಸೇವನೆ ಮಾಡುವ ಜೊತೆಗೆ, ಕೆಲವೊಂದು ಆಹಾರದಿಂದಲೂ ಕೂಡ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು! ಹಾಗಾದ್ರೆ ಅಂತಹ ಆಹಾರ-ಪದಾರ್ಥಗಳು ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಬಾಳೆಹಣ್ಣು

• ಬಡವರ ಹಣ್ಣು ಎಂದು ಕರೆಯಲಾಗುವ ಬಾಳೆ ಹಣ್ಣು, ವರ್ಷ ಪೂರ್ತಿ, ಕೈಗೆಟಕುವ ಬೆಲೆಗೆ ಸಿಗುವ ಹಣ್ಣು. ಪ್ರಮುಖವಾಗಿ ಈ ಹಣ್ಣಿನಲ್ಲಿ ಪೊಟ್ಯಾ ಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿ ರುವವರಿಗೆ, ಇದೊಂದು ಸುರಕ್ಷಿತವಾಗಿ ಸೇವಿಸ ಬಹು ದಾದ ಹಣ್ಣು ಎನ್ನುವುದರಲ್ಲಿ ಅನುಮಾನವೇ ಬೇಡ!

• ಹೀಗಾಗಿ ನಿತ್ಯವೂ ಒಂದು ಅಥವಾ ಎರಡು ಬಾಳೆ ಹಣ್ಣುಗಳನ್ನು ಸೇವಿಸುವುದನ್ನು ಈ ಕಾಯಿಲೆ ಇರುವ ಜನರು ಅಭ್ಯಾಸ ಮಾಡಿಕೊಳ್ಳಬೇಕು.

ಡಾರ್ಕ್ ಚಾಕಲೇಟ್

• ಅರೆ ಡಾರ್ಕ್ ಚಾಕಲೇಟ್ ತಿಂದ್ರೆ, ರಕ್ತದೊತ್ತಡವನ್ನು ನಿಯಂತ್ರಣ ಮಾಡಬಹುದಾ? ಇದು ನಿಜಾನಾ? ಎಂದು ನಿಮಗೆ ಅಚ್ಚರಿಯಾಗಬಹುದು! ಆದರೆ ನಿಮಗೆ ಗೊತ್ತಿರಲಿ, ನಮ್ಮ ಆರೋಗ್ಯಕ್ಕೆ ಒಂದೊಂದು ಬಗೆಯ ಆಹಾರ ಪದಾರ್ಥಗಳು, ನಮಗೆ ಗೊತ್ತಿಲ್ಲ ದಂತೆ ಹಲವಾರು ಲಾಭಗಳನ್ನು ಕೊಡುತ್ತದೆ. ಅದ ರಲ್ಲಿ ಡಾರ್ಕ್ ಚಾಕಲೇಟ್ ಸಹ ಒಂದು.

• ಇದಕ್ಕೆ ಪ್ರಮುಖ ಕಾರಣ, ಈ ಚಾಕಲೇಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವುದರಿಂದ, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವಂತೆ, ಮಾಡುವುದು ಮಾತ್ರವಲ್ಲದೆ, ರಕ್ತನಾಳಗಳನ್ನು ಮೆದುಗೊಳಿಸಿ ರಕ್ತ ಪರಿಚಲನೆ ಸುಗಮವಾಗುವಂತೆ ಮಾಡುತ್ತದೆ. ಇದ ರಿಂದಾಗಿ ರಕ್ತದೊತ್ತಡದ ಮಟ್ಟವನ್ನು ಕಾಪಾಡಲು ನೆರವಾಗುವುದು.

ವಿಟಮಿನ್ ಸಿ ಅಂಶ ಇರುವ ಆಹಾರಗಳು

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಸಿಟ್ರಸ್ ಜಾತಿಗೆ ಸೇರಿದ ಹಣ್ಣು ಹಾಗೂ ತರಕಾರಿಗಳಲ್ಲಿ, ಹೇರಳವಾಗಿ ಕಂಡು ಬರುವ ವಿಟಮಿನ್ ಸಿ ಅಂಶ ಆಂಟಿ ಆಕ್ಸಿಡೆಂಟ್ ಅಂಶದ ಮೂಲ ವಾಗಿರುವುದರಿಂದ, ರಕ್ತದೊತ್ತಡವನ್ನು ನಿಯಂತ್ರಣ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುವ ಗುಣಲಕ್ಷಣಗ ಳನ್ನು ಹೊಂದಿದೆ.

ದಿನಾ ಒಂದು ಕಪ್ ಮೊಸರು ಸೇವಿಸಿ

• ಹಾಲಿನ ಉಪ ಉತ್ಪನ್ನವಾದ ಮೊಸರಿನಲ್ಲಿ, ಪೌಷ್ಟಿಕ ಸತ್ವಗಳಿಗೆ ಏನೂ ಕೊರತೆ ಇಲ್ಲ! ಪ್ರಮುಖವಾಗಿ ಪೊಟ್ಯಾಶಿಯಂ ಅಂಶ ಮೊಸರಿನಲ್ಲಿ ಹೇರಳವಾಗಿ ಕಂಡು ಬರುವುದರಿಂದ, ದೇಹದಲ್ಲಿ ಕಂಡು ಬರುವ ಸೋಡಿಯಂ ಪ್ರಮಾಣವನ್ನು ನಿಯಂತ್ರಿಸಿ, ರಕ್ತದೊ ತ್ತಡ ಕಾಯಿಲೆಯನ್ನು ನಿಯಂತ್ರಣ ತಪ್ಪದಂತೆ ನೋಡಿಕೊಳ್ಳುತ್ತದೆ.

• ಹೀಗಾಗಿ ಈಗಾಗಲೇ ಅಧಿಕ ರಕ್ತದೊತ್ತಡ ಸಮಸ್ಯೆ ಯಿಂದ ಬಳಲುತ್ತಿರುವವರು, ಮಿತವಾಗಿ ಸೇವನೆ ಮಾಡುತ್ತಾ ಬಂದರೆ ಅಥವಾ ಊಟದ ಜೊತೆಗೆ ಒಂದು ಕಪ್ ಮೊಸರನ್ನು ಕೂಡ ಸೇವನೆ ಮಾಡುವುದ ರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.

ಟೊಮೆಟೊ ಜ್ಯೂಸ್ ಕುಡಿಯಿರಿ

• ಪ್ರತಿದಿನ ಅಡುಗೆಗೆ ಬಳಸುವ ಟೊಮೆಟೊ ಹಣ್ಣು ಕೂಡ, ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳ ಲುತ್ತಿರುವವರಿಗೆ ಬಹಳ ಒಳ್ಳೆಯದು.

• ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ಲೈಕೋಪಿನ್ ಎಂಬ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ, ವಿಟಮಿನ್ ಎ, ಕ್ಯಾರೋಟಿನ್ ಅಂಶ, ಮತ್ತು ಕ್ಯಾಲ್ಸಿ ಯಂ ಅಂಶದಂತಹ ಆರೋಗ್ಯಕಾರಿ ಅಂಶಗಳು, ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕಂಡುಬರುವುದ ರಿಂದ, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವು ದರ ಜೊತೆಗೆ, ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವುದು.

• ಹೀಗಾಗಿ ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆ ಯಿಂದ ಬಳಲುತ್ತಿರುವವರು, ಪ್ರತಿದಿನ ಉಪ್ಪು-ಸಕ್ಕರೆ ಬೆರೆಸದ ಟೊಮೆಟೊ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ಕಾಯಿಲೆಯನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬಹುದು .

ಹಾಲಿನಲ್ಲಿ ಖರ್ಜೂರಗಳನ್ನು ನೆನೆಸಿಟ್ಟು ತಿನ್ನಬೇಕು

ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲು ತ್ತಿರುವವರು, ಪ್ರತಿದಿನ ಸುಮಾರು ಐದಾರು ಹಸಿ ಖರ್ಜೂರ ಗಳನ್ನು ಬೆಳಗ್ಗೆ ತಿಂಡಿ ತಿನ್ನುವ ಅರ್ಧ ಗಂಟೆ ಮುನ್ನ, ಹಾಲಿ ನಲ್ಲಿ ಹಾಕಿ ನೆನೆಸಿ, ತಿನ್ನುವ ಅಭ್ಯಾಸ ಮಾಡಿಕೊಂಡರೆ ಕ್ರಮೇ ಣವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

• ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರು ವವರು, ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸ ಗಳಿಂದ ದೂರವಿರಬೇಕು. ಇಲ್ಲಾಂದ್ರೆ ಈ ಕಾಯಿಲೆ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿರು ತ್ತದೆ.

• ಆದಷ್ಟು ಕಾಫಿ ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡಿ! ಯಾಕೆಂದ್ರೆ ಇದರಲ್ಲಿ ಕೆಫಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ರಕ್ತದೊತ್ತಡ ದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಬದಲು ಗಿಡಮೂಲಿಕೆಯ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

• ರಕ್ತದೊತ್ತಡದ ರೋಗ ಲಕ್ಷಣಗಳು ಇದ್ದವರು, ಎರಡು ತಿಂಗಳಿಗೊಮ್ಮೆ ಆದರೂ ಕೂಡ, ಬಿಪಿ ಪರೀಕ್ಷೆ ಮಾಡಿ ಸುವ ಅಭ್ಯಾಸವಿಟ್ಟುಕೊಳ್ಳಿ.

• ದೈನಂದಿನ ಆಹಾರ ಪದ್ಧತಿಯಲ್ಲಿ ಆದಷ್ಟು ಉಪ್ಪಿ ನಾಂಶ ಕಡಿಮೆ ಇರುವ ಹಾಗೆ ನೋಡಿಕೊಳ್ಳಿ. ಇದ ರಿಂದ ದೇಹಕ್ಕೆ ಸೋಡಿಯಂ ಅಂಶ ಕಡಿಮೆ ತಲುಪು ತ್ತದೆ. ನೆನಪಿಡಿ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದವ ರಿಗೆ ಉಪ್ಪಿನಾಂಶ ಇರುವ ಆಹಾರಗಳಿಂದ ದೂರವಿರ ಬೇಕು.

• ಈಗಾಗಲೇ ಅಧಿಕ ರಕ್ತದೊತ್ತಡದ ಕಾಯಿಲೆ ಇದ್ದವರು ಸಂಸ್ಕರಿಸಿದ ಆಹಾರ ಪದಾರ್ಥಗಳು ಹಾಗೂ ಎಣ್ಣೆ ಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರವಿದ್ದರೆ ಒಳ್ಳೆಯದು.

ಹಿಂದಿನ ಲೇಖನಜನರು ಪ್ರಬುದ್ಧರು ಎಂಬುದನ್ನು ಸಾಬೀತುಪಡಿಸಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಮುಂದಿನ ಲೇಖನನನ್ನನ್ನು ಸೋಲಿಸುವ ಹಠ ತೊಟ್ಟಿದ್ದವರು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ: ಜಗದೀಶ್ ಶೆಟ್ಟರ್