ಮನೆ ರಾಜಕೀಯ ಸಚಿವ ಈಶ್ವರಪ್ಪ ದೇಶದ್ರೋಹಿ:  ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ

ಸಚಿವ ಈಶ್ವರಪ್ಪ ದೇಶದ್ರೋಹಿ:  ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ

0

ಪಾಟ್ನಾ: ಭವಿಷ್ಯದಲ್ಲಿ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಾಡಲೂ ಬಹುದು ಎಂಬ ಕೆಎಸ್ ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು,  ಸಚಿವ ಕೆ.ಎಸ್ ಈಶ್ವರಪ್ಪ ದೇಶದ್ರೋಹಿ ಎಂದು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಕಿಡಿಕಾರಿದ್ದಾರೆ.

“ಮೊದಲ ಸಾಮ್ರಾಟ್ ಅಶೋಕ್ ಅವರನ್ನು ಅವಮಾನಿಸಲಾಯಿತು. ಬಿಜೆಪಿ ಈಗ ತ್ರಿವರ್ಣ ಧ್ವಜದ ವಿರುದ್ಧ ಅಭಿಯಾನ ನಡೆಸುವಂತಿದೆ. ಭಾರತ ಇದನ್ನು ಹೇಗೆ ಸಹಿಸಿಕೊಳ್ಳುತ್ತದೆ?” ಎಂದು ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಅವರು ಮಿತ್ರ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿ ಸಚಿವ ಈಶ್ವರಪ್ಪ ಅವರ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದು,  ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.

ಹಿಂದಿನ ಲೇಖನಡಿಎನ್‌ಎ ಸಾಕ್ಷ್ಯಾಧಾರಗಳಿಲ್ಲವೆಂಬ ಕಾರಣಕ್ಕೆ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ : ಕರ್ನಾಟಕ ಹೈಕೋರ್ಟ್
ಮುಂದಿನ ಲೇಖನರಾಜ್ಯದಲ್ಲಿ ಫೆ.15ರವರೆಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ