ಮನೆ ರಾಷ್ಟ್ರೀಯ ಮಿಜೋರಾಂ ಕಲ್ಲು ಕ್ವಾರಿ ದುರಂತ: 8 ಕಾರ್ಮಿಕರ ಶವ ಹೊರಕ್ಕೆ

ಮಿಜೋರಾಂ ಕಲ್ಲು ಕ್ವಾರಿ ದುರಂತ: 8 ಕಾರ್ಮಿಕರ ಶವ ಹೊರಕ್ಕೆ

0

ಐಜ್ವಾಲ್: ಮಿಜೋರಾಂನ ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟ ಬಿಹಾರದ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಸೋಮವಾರ ಸಂಜೆ ಕುಸಿದಿದ್ದ ಕಲ್ಲುಕ್ವಾರಿ ಅಡಿ 12 ಮಂದಿ ಸಿಲುಕಿದ್ದರು. ಈಗ 8 ಮಂದಿಯ ಶವವನ್ನು ಹೊರತೆಗೆಯಲಾಗಿದ್ದು, ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯಲಿದೆ. ಶೋಧ ಕಾರ್ಯಾಚರಣೆಯೂ ಮುಂದುವರಿದಿದ್ದು, ನಾಪತ್ತೆಯಾಗಿರುವ ಎಲ್ಲ ಕಾರ್ಮಿಕರು ಪತ್ತೆಯಾಗುವವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.

ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌’ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ಊಟದ ವಿರಾಮದ ಬಳಿಕ ಕೆಲಸದಲ್ಲಿ ತೊಡಗಿದ್ದಾಗ ಅವಘಡ ಸಂಭವಿಸಿದೆ. ಕಾರ್ಮಿಕರ ಜೊತೆಗೆ ಐದು ಹಿಟಾಚಿ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ.

ಲೀಟೆ ಮತ್ತು ನಾತಿಯಾಲ್ ಗ್ರಾಮಗಳ ಜನರು ಸ್ವಯಂಪ್ರೇರಿತರಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಪಡೆಯನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ಎರಡೂವರೆ ವರ್ಷಗಳಿಂದ ಈ ಕ್ವಾರಿ ಕಾರ್ಯಾಚರಿಸುತ್ತಿದೆ.

ಹಿಂದಿನ ಲೇಖನನ್ಯಾಯಾಲಯದ ಆದೇಶ ಧಿಕ್ಕರಿಸಿದ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಭಾಗ ನವೆಂಬರ್ 16 ರಿಂದ ಅಮರಣಾಂತ ಉಪವಾಸ
ಮುಂದಿನ ಲೇಖನ800 ಕೋಟಿ ಮುಟ್ಟಿದ ಜಾಗತಿಕ ಜನಸಂಖ್ಯೆ: 2023ಕ್ಕೆ ಚೀನಾವನ್ನು ಹಿಂದಿಕ್ಕಲಿರುವ ಭಾರತ