ಮನೆ ರಾಷ್ಟ್ರೀಯ ಲಂಕಾ ಪರಿಸ್ಥಿತಿ ಮೇಲೆ ನಿಗಾ: ಸೌರವ್‌ ಗಂಗೂಲಿ

ಲಂಕಾ ಪರಿಸ್ಥಿತಿ ಮೇಲೆ ನಿಗಾ: ಸೌರವ್‌ ಗಂಗೂಲಿ

0

ಲಂಡನ್ (London): ಶ್ರೀಲಂಕಾ ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಈ ಕುರಿತಾಗಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಮೇಲೆ ನಿಗಾ ವಹಿಸಲಾಗಿದೆ. ಸದ್ಯ ಲಂಕಾದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಆಡುತ್ತಿದೆ. ಶ್ರೀಲಂಕಾ ತಂಡವು ಉತ್ತಮವಾಗಿ ಆಡುತ್ತಿದೆ. ಒಂದು ತಿಂಗಳು ಕಾಯೋಣ ಎಂದು ಹೇಳಿದ್ದಾರೆ.

ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿ ಶ್ರೀಲಂಕಾದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಆದರೆ ಲಂಕಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಕಾದು ನೋಡುವ ತಂತ್ರವನ್ನು ಬಿಸಿಸಿಐ ಅನುಸರಿಸಿದೆ.

ಏತನ್ಮಧ್ಯೆ ಕಳಪೆ ಲಯದಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ದಾದಾ ಬೆಂಬಲ ಸೂಚಿಸಿರುವ ಗಂಗೂಲಿ ಅವರು, ಕ್ರೀಡೆಯಲ್ಲಿ ಇಂತಹ ಸಂಗತಿಗಳು ಆಗುತ್ತಿರುತ್ತವೆ. ಇದು ಸಚಿನ್, ದ್ರಾವಿಡ್, ನನಗೆ ಸೇರಿದಂತೆ ಎಲ್ಲರಿಗೂ ಸಂಭವಿಸಿದೆ. ಭವಿಷ್ಯದಲ್ಲೂ ಸಂಭವಿಸುತ್ತದೆ. ಅದು ಕ್ರೀಡೆಯ ಭಾಗವಾಗಿದ್ದು, ಓರ್ವ ಆಟಗಾರನಾಗಿ ನಿಮ್ಮ ಆಟದತ್ತ ಗಮನ ಹರಿಸಬೇಕು ಎಂದು ಹೇಳಿದರು.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನದೆಹಲಿ ಪೊಲೀಸರಿಂದ ಮಾನವೀಯ ಹೆಜ್ಜೆ: ಪ್ರತಿದಿನ ವೃದ್ಧರ ಮನೆಗೆ ಭೇಟಿ