ಮನೆ ತಂತ್ರಜ್ಞಾನ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ ಮೊಟೊ G13 ಫೋನ್ !

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ ಮೊಟೊ G13 ಫೋನ್ !

0

ಮೊಟೊರೊಲಾ ಕಂಪನಿಯು ಮೊಟೊ G13 ಸ್ಮಾರ್ಟ್ಫೋನ್ ಈಗ ಆಕರ್ಷಕ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್ ಫೋನ್ ಜನಪ್ರಿಯ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಫ್ಲಿಪ್ ಕಾರ್ಟ್ ನಲ್ಲಿ ದೊಡ್ಡ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.

Join Our Whatsapp Group

ಮೊಟೊರೊಲಾ ಸಂಸ್ಥೆಯ ಮೊಟೊ G13 ಫೋನ್ ಫ್ಲಿಪ್ ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈಗ 28% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ ನ 4 GB RAM +128 GB ROM ಆಂತರೀಕ ಸಂಗ್ರಹದ ಬೆಲೆಯು 13,999ರೂ. ದರ ಹೊಂದಿದ್ದು, ಆಫರ್ ನಲ್ಲಿ ಇದು 9,999ರೂ. ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್ ಗಳ ಕೊಡುಗೆ ಸಹ ಗ್ರಾಹಕರಿಗೆ ಖಚಿತವಾಗಿ ದೊರೆಯುತ್ತದೆ.

ಈ ಮೊಬೈಲ್ ಬಜೆಟ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದರೂ, ಆಫರ್ ನಲ್ಲಿ ಈಗ ಅಗ್ಗದ ಪ್ರೈಸ್ ಟ್ಯಾಗ್ ಪಡೆದಿದೆ. ಇನ್ನು ಇದು ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಇದರೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯದ ಪವರ್ ಪಡೆದಿದೆ ಹಾಗೂ 10W ಚಾರ್ಜಿಂಗ್ ಬೆಂಬಲ ಪಡೆದಿದೆ .

ಈ ಸ್ಮಾರ್ಟ್ಫೋನ್ 6.5 ಇಂಚಿನ IPS LCD ಹೆಚ್ಡಿ+ ರೆಸಲ್ಯೂಶನ್ ಡಿಸ್ ಪ್ಲೆ ಪಡೆದಿದ್ದು, ಇದು 576Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಹಾಗೆಯೇ 90Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಈ ಡಿಸ್ ಪ್ಲೆ ಪಾಂಡ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಮೊಟೊ G13 ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ನಲ್ಲಿ ರನ್ ಆಗುತ್ತದೆ. ಇದರೊಂದಿಗೆ 4 GB RAM ಹಾಗೂ 128 GB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದ್ದು, ಈ ಸ್ಟೋರೇಜ್ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್ ಡಿ ಕಾರ್ಡ್ ಸ್ಲಾಟ್ ಆಯ್ಕೆ ಅನ್ನು ಹೊದಿದೆ.

ಈ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ ಬ್ಯಾಕ್ ಕ್ಯಾಮೆರಾ  50 mp , 2 mp  ಸೆಕೆಂಡರಿ ಸೆನ್ಸರ್ ಹಾಗೂ 2 mp ಸೆನ್ಸರ್ ಅನ್ನು ಹೊಂದಿದೆ. ಸೆಲ್ಫಿ8mp  ಕ್ಯಾಮೆರಾವನ್ನು ಒಳಗೊಂಡಿದೆ.

ಈ ಫೋನ್ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದ್ದು, ಚಾರ್ಜಿಂಗ್ ಗಾಗಿ ಯು ಎಸ್ ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹೊಂದಿದೆ. ಇದರೊಂದಿಗೆ ಡ್ಯುಯಲ್ 4G VoLTE, ವೈ ಫೈ 802.11 ac (2.4GHz + 5GHz), ಬ್ಲೂ ಟೂತ್ ಆವೃತ್ತಿ 5.1, ಜಿಪಿಎಸ್ ಹೊಂದಿದ್ದು, 3.5 ಎಂ ಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್ ಗಳು, ಡಾಲ್ಬಿ ಅಟ್ಮಾಸ್ ಸೌಂಡ್ ನೊಂದಿಗೆ IP52 ರೇಟಿಂಗ್ ಪಡೆದಿದೆ.

ಹಿಂದಿನ ಲೇಖನರಿಪಬ್ಲಿಕ್ ಆಫ್ ಸಬ್ ರಿಜಿಸ್ಟ್ರಾರ್:  ವ್ಯವಸ್ಥೆ ಸರಿಪಡಿಸಲು ಪ್ರಯತ್ನ; ಹೈಕೋರ್ಟ್ ಗೆ ಸರ್ಕಾರದ ಭರವಸೆ
ಮುಂದಿನ ಲೇಖನಮೈಸೂರು: ಆಟೋ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯ