ಮನೆ ಅಪರಾಧ ಅನೈತಿಕ ಸಂಬಂಧ ಶಂಕೆ: ಹೆಂಡತಿ ಮಕ್ಕಳಿಗೆ ಬೆಂಕಿ ಹಚ್ಚಿದ ಪತಿ

ಅನೈತಿಕ ಸಂಬಂಧ ಶಂಕೆ: ಹೆಂಡತಿ ಮಕ್ಕಳಿಗೆ ಬೆಂಕಿ ಹಚ್ಚಿದ ಪತಿ

0

ತುಮಕೂರು: ಅನೈತಿಕ ಸಂಬಂಧ ಶಂಕೆಯಿಂದಾಗಿ ಪತಿಯು ತನ್ನ ಹೆಂಡತಿ, ಮಕ್ಕಳಿಗೆ ಬೆಂಕಿ ಹಚ್ಚಿರುವ ಘಟನೆ ತುಮಕೂರು ಜಿಲ್ಲೆ‌ ಮಧುಗಿರಿ ತಾಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಅವರು ಜೀವ ಉಳಿಸಿಕೊಳ್ಳಬಾರದೆಂದು ರೂಂಗೆ ಬೀಗ ಹಾಕಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಸಾವು, ಮಕ್ಕಳ ಸ್ಥಿತಿ ಗಂಭೀರ.. ರಾಮಾಂಜಿ ಎಂಬುವನಿಂದ ಕೃತ್ಯ ನಡೆದಿದೆ. ಘಟನೆಯಲ್ಲಿ ಪತ್ನಿ ಶಾಂತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 17 ವರ್ಷ, 13 ವರ್ಷ ಹಾಗೂ ಅಮೃತಾ 10 ವರ್ಷ ವಯಸ್ಸಿನ ಮೂವರು ಹೆಣ್ಣು ಮಕ್ಕಳಿಗೆ ಗಂಭೀರ ಗಾಯವಾಗಿದೆ.

ಮೂವರಿಗೂ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಬೆಂಕಿ‌ ಹಚ್ಚಿ ಪರಾರಿಯಾಗಿದ್ದ ಆರೋಪಿ ರಾಮಾಂಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನರಾಜ್ಯದಲ್ಲಿ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಸಾಧ್ಯತೆ: ತಜ್ಞರು
ಮುಂದಿನ ಲೇಖನಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ: ಮೊದಲ ದಿನವೇ ತಾಂತ್ರಿಕ ಸಮಸ್ಯೆ