ಮನೆ ರಾಜ್ಯ ಮೈಸೂರಿನಲ್ಲಿ ಟು-ಲಂದನ್ ಬೈಕ್ ಯಾತ್ರೆಗೆ ಸಂಸದ ಯದುವೀರ್‌ ಚಾಲನೆ..!

ಮೈಸೂರಿನಲ್ಲಿ ಟು-ಲಂದನ್ ಬೈಕ್ ಯಾತ್ರೆಗೆ ಸಂಸದ ಯದುವೀರ್‌ ಚಾಲನೆ..!

0

ಮೈಸೂರು : ಮೈಸೂರಿನ ಉದ್ಯಮಿ ಒಬ್ಬರು ಮೈಸೂರ್ ಟು ಲಂಡನ್ ಬೈಕ್ ಯಾತ್ರೆ ಭಾನುವಾರ ಪ್ರಾರಂಭಿಸಿದ್ದಾರೆ. ಉದ್ಯಮಿಯಾದ ನಾಗಾರ್ಜುನ ಅನಂತ ಭಗವಾನ್ ಎಂಬುವವರು ಲಂಡನ್ ಗೆ ಬೈಕ್ ನಲ್ಲಿ ಯಾತ್ರೆ ಹೋರಾಟವರಾಗಿದ್ದಾರೆ. ಅರಮನೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸಂಸದ ಯದುವೀರ್ ಅವರು ಬೈಕ್ ಯಾತ್ರೆಗೆ ಚಾಲನೆ ನೀಡಿದರು.

ನಾಗಾರ್ಜುನ ಅನಂತ ಭಗವಾನ್ ರವರು ನೇಪಾಳ ಟಿಬೆಟ್ ಚೀನಾ ರಷ್ಯಾ ಪೋಲಾಂಡ್ ಚೆಕ್ ಗಣ ರಾಜ್ಯ ಅಷ್ಟ್ರೀಯ ಹಂಗೇರಿ ಇಟಲಿ ಸ್ವಿಜರ್ಲ್ಯಾಂಡ್ ಜರ್ಮನಿ ಲಂಡನ್ ಬೆಲ್ಜಿಯಂ ಹಾಗೂ ಫ್ರಾನ್ಸ್ ಮೂಲಕ ಇಪ್ಪತ್ತು ಸಾವಿರ ಕಿಲೋಮೀಟರ್ ಸಾಗಿ ಲಂಡನ್ ಸೇರಲಿದ್ದಾರೆ. ವಿವಿಧ ದೇಶಗಳ ಜನರನ್ನು ಭೇಟಿ ಮಾಡುವುದು ಸಂಸ್ಕೃತಿಯನ್ನು ಮನಗಣ್ಣುವುದು ಆಯಾ ದೇಶದ ಜನರೊಂದಿಗೆ ಭಾರತದ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಈ ಬೈಕ್ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ನಾಗಾರ್ಜುನ ಅನಂತ ಭಗವಾನ್ ತಿಳಿಸಿದ್ದಾರೆ.