ಮನೆ ಸಾಹಿತ್ಯ ಮೈಸೂರು: ನಾಡ ಕವಿ ಕುವೆಂಪು ಅವರ ಜನ್ಮ ದಿನಾಚರಣೆ

ಮೈಸೂರು: ನಾಡ ಕವಿ ಕುವೆಂಪು ಅವರ ಜನ್ಮ ದಿನಾಚರಣೆ

0

ಮೈಸೂರು(Mysuru): ರಾಷ್ಟ್ರಕವಿ, ಜಗದ ಕವಿ, ವಿಶ್ವ ಮಾನವ, ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಹುಟ್ಟು ಹಬ್ಬವನ್ನು ಅಂಗವಾಗಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ  ಅಗ್ರಹಾರ ವೃತ್ತದಲ್ಲಿ ಆಚರಿಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕುವೆಂಪು ಅವರು ಅವರ ಕವಿತೆ, ಕವನಗಳ ಮೂಲಕ ಸಮಾಜದ ಅಸಮಾನತೆಯನ್ನು ಅಳಿಸಿ ಹಾಕಲು ಶ್ರಮಿಸಿದರು. ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದರು. ಹಾಗೂ ಕನ್ನಡ ನೆಲ ಜಲ ಭಾಷೆ ಗಾಗಿ ಜೀವನ ಪರ್ಯಂತ ಹೋರಾಟ ಮಾಡಿದರು  ಎಂದು ಹೇಳಿದರು.

ನಂತರ ಮುಡಾ ಅಧ್ಯಕ್ಷ ಯಶಸ್ವಿ ಎಸ್ ಸೋಮಶೇಖರ್ ಮಾತನಾಡಿ, ಕುವೆಂಪು ಅವರು ನಮ್ಮ ರಾಜ್ಯ ಕಂಡಂತಹ ಮಹಾನ್ ಚೇತನ. ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದವರು. ಕರ್ನಾಟಕ ಸೇನಾ ಪಡೆ ಅವರ ಜಯಂತಿ ಆಚರಿಸಿ ಅವರನ್ನು ನೆನೆಸುತ್ತಿರುವುದು ಶ್ಲಾಘನೀಯ ಎಂದರು.

ನೆರೆದಿದ್ದವರಿಗೆ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿಜಿ ಗಂಗಾಧರ್ ಸಿಹಿ ವಿತರಣೆಯನ್ನು ಮಾಡಿದರು.

ಮುಖ್ಯ ಅತಿಥಿಗಳಾಗಿ  ಡಾ. ರಘುರಾಮ್ ಕೆ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕೆ ಆರ್ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ  ಸುರೇಶ್ ಗೋಲ್ಡ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್, ನಾಗಣ್ಣ, ಮುಡಾ ಸದಸ್ಯೆ ಲಕ್ಷ್ಮೀದೇವಿ  ಡಾ. ಶಾಂತರಾಜೇ ಅರಸ್, ಪ್ರಜೀಶ್ ಪಿ, ಯೋಗೀಶ್ ಉಪ್ಪಾರ, ಸಿ ಎಚ್ ಕೃಷ್ಣಯ್ಯ, ಪ್ರಭು ಶಂಕರ್, ಎಳನೀರು ರಾಮಣ್ಣ, ಎಸ್. ಚಂದ್ರು, ದರ್ಶನ್ ಗೌಡ, ಪ್ರಭಾಕರ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಹಿಂದಿನ ಲೇಖನಬೆಂಗಳೂರು ಜಲಮಂಡಳಿ ವಾಟರ್ ಬಿಲ್’​ಗೆ ಕನ್ನ: ಸಿಬ್ಬಂದಿ ಸೇರಿದಂತೆ 9 ಮಂದಿ ಬಂಧನ
ಮುಂದಿನ ಲೇಖನಕೆಆರ್’ಎಸ್ ನಲ್ಲಿ ಪ್ರವಾಸಿಗರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ