ಮನೆ ಸುದ್ದಿ ಜಾಲ ಕೆಆರ್’ಎಸ್ ನಲ್ಲಿ ಪ್ರವಾಸಿಗರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಕೆಆರ್’ಎಸ್ ನಲ್ಲಿ ಪ್ರವಾಸಿಗರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ

0

ಮಂಡ್ಯ(Mandya): ಕಳೆದ ಎರಡು ತಿಂಗಳಿನಿಂದ ವಿಶ್ವ ವಿಖ್ಯಾತ ಕೆಆರ್’ಎಸ್ ಜಲಾಶಯದ ಬೃಂದಾವನದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.

ಕಳೆದ ತಿಂಗಳು ಜಲಾಶಯದ ಮೇಲೆ ಹಾಗೂ ಬೃಂದಾವನದ ದಕ್ಷಿಣ ಗೇಟ್’ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆತಂಕ ಸೃಷ್ಟಿಸಿತ್ತು.

ಚಿರತೆ ಸೆರೆಗೆ ಅರಣ್ಯ ಇಲಾಖೆಯವರು ಕೂಬಿಂಗ್, ಸಿಸಿಕ್ಯಾಮೆರಾ ಹಾಗೂ ಎಂಟು ಕಡೆ ಬೋನು ಇರಿಸಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ತಪ್ಪಿಸಿಕೊಂಡು ಚಳ್ಳೆ ತಿನ್ನಿಸಿತ್ತು. ಆಗಾಗ ಪ್ರವಾಸಿಗರಿಗೆ ಕಾಣಿಸಿಕೊಂಡು  ಆತಂಕ ಹುಟ್ಟಿಸಿತ್ತು.

ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೃಂದಾವನ ಬಂದ್ ಮಾಡಿದ್ದರಿಂದ ಸುಮಾರು 75ಲಕ್ಷ ರೂ. ಹೆಚ್ಚು ನಷ್ಟ ಸಂಭವಿಸಿತ್ತು.

ಬುಧವಾರ ಮುಂಜಾನೆ ಬೃಂದಾವನ ಬಳಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಕಾಡಿಗೆ ಬಿಡಲು ಕ್ರಮ ವಹಿಸಿದ್ದಾರೆ.

ಹಿಂದಿನ ಲೇಖನಮೈಸೂರು: ನಾಡ ಕವಿ ಕುವೆಂಪು ಅವರ ಜನ್ಮ ದಿನಾಚರಣೆ
ಮುಂದಿನ ಲೇಖನಮೈಸೂರಿನಲ್ಲಿ ನೂತನ ವಿಜಯನಗರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಪ್ರಾರಂಭ