ಮನೆ ಶಿಕ್ಷಣ ಮೈಸೂರು: ಬದಲಾದ ಪರೀಕ್ಷಾ ಕೇಂದ್ರಗಳು

ಮೈಸೂರು: ಬದಲಾದ ಪರೀಕ್ಷಾ ಕೇಂದ್ರಗಳು

0

ಮೈಸೂರು: ಏ.೦೧ ಮತ್ತು ೦೨ ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಗರದ ೧೭ ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯದ ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಮೈಸೂರಿನ ನಾಲ್ಕು ಪರೀಕ್ಷಾ ಕೇಂದ್ರಗಳನ್ನು ಆಯೋಗವು ಬದಲಾವಣೆ ಮಾಡಿದೆ.

ನಗರದ ಎನ್ ಎಸ್ ರೋಡ್‌ ನ ಮಹಾರಾಣಿ ಪಿಯು ಕಾಲೇಜ್ ಪರೀಕ್ಷಾ ಕೇಂದ್ರದಿಂದ ಶಾರದಾ ವಿಲಾಸ ರಸ್ತೆಯ ಶಾರದಾ ವಿಲಾಸ್ ಕಾಲೇಜಿಗೆ, ಜೆ ಎಲ್ ಬಿ ರೋಡ್ ನ ಮಹಾರಾಣಿ ಪಿಯು ಕಾಲೇಜ್ ನಿಂದ ಡಿ ಬನುಮಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಚೇಗೌಡನ ಕೊಪ್ಪಲು ಹೆಬ್ಬಾಳ್ ಪರೀಕ್ಷಾ ಕೇಂದ್ರದಿಂದ ಸಿದ್ಧಾರ್ಥ ನಗರದ ಟೆರಿಷಿಯನ್ ಕಾಲೇಜ್ ಪಿಯು ಕಾಲೇಜಿಗೆ ಹಾಗೂ ಒಂಟಿಕೊಪ್ಪಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ರಾಜೇಂದ್ರ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿದೆ.

ಸದರಿ ಉಪ ಕೇಂದ್ರಗಳಿಗೆ ಹಂಚಿಕೆಯಾದ ಅಭ್ಯರ್ಥಿಗಳು ಮತ್ತೊಮ್ಮೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ಸಮಯಕ್ಕೆ ಬದಲಾವಣೆ ಮಾಡಿರುವ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಮದುವೆಯಾಗುವುದಾದರೆ ಈ ರಾಶಿಯವರನ್ನೇ ಆಗಿ..!
ಮುಂದಿನ ಲೇಖನಜಮ್ಮು ಮತ್ತು ಕಾಶ್ಮೀರದ ಕುಗ್ರಾಮವೊಂದರಲ್ಲಿ ಪ್ರಬಲ ಸ್ಫೋಟ