ಮನೆ ಸುದ್ದಿ ಜಾಲ ಮೈಸೂರು: ನಿಶಬ್ದ ವಲಯಗಳನ್ನಾಗಿ ಘೋಷಣೆ

ಮೈಸೂರು: ನಿಶಬ್ದ ವಲಯಗಳನ್ನಾಗಿ ಘೋಷಣೆ

0

ಮೈಸೂರು(Mysuru):  ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಸ್ಥಳಗಳನ್ನು ನಿಶಬ್ದ ವಲಯಗಳನ್ನಾಗಿ ಘೋಷಿಸಲಾಗಿದೆ.
ಆದ್ದರಿಂದ ಮೈಸೂರಿನ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರು, ಅಸಹಾಯಕರು, ಅಸ್ವಸ್ಥರು ಹಾಗೂ ಪ್ರಾಣಿ ಪಕ್ಷಿಗಳ ಆರೋಗ್ಯ ಮತ್ತು ರಕ್ಷಣೆಯ ಹಿತ ದೃಷ್ಟಿಯಿಂದ ಮೈಸೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲವು ಪ್ರದೇಶಗಳನ್ನು ದೀಪಾವಳಿ ಹಬ್ಬದ ಅಂಗವಾಗಿ ನಿಶಬ್ದ ವಲಯಗಳನ್ನಾಗಿ ಘೋಷಿಸಲು ಆದೇಶ ಹೊರಡಿಸಲಾಗಿದೆ.
ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯ, ಕುಕ್ಕರಹಳ್ಳಿ ಕೆರೆ ಪ್ರದೇಶ, ಕಾರಂಜಿಕೆರೆ ಪ್ರದೇಶ, ಲಿಂಗಾಬುದಿಕೆರೆ ಪ್ರದೇಶ, ಸಾರ್ವಜನಿಕ ಉದ್ಯಾನವನಗಳು, ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳು, ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯ, ಧಾರ್ಮಿಕ ಸ್ಥಳಗಳಲ್ಲಿ 100 ಮೀಟರ್ ಸುತ್ತಳತೆ ಪ್ರದೇಶವನ್ನು 2022ರ ಅಕ್ಟೋಬರ್ 23 ರಿಂದ 26 ರ ವರೆಗೆ ಬೆಳಿಗ್ಗೆ 6 ಗಂಟೆಯಿAದ ಮಧ್ಯರಾತ್ರಿ 12 ಗಂಟೆವರೆಗೆ ನಿಶಬ್ದ ವಲಯ ಎಂದು ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಘೋಷಿಸಿರುತ್ತಾರೆ.

ಹಿಂದಿನ ಲೇಖನಜೋಕು-ಜೋಕಾಲಿ
ಮುಂದಿನ ಲೇಖನರೆಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿನ ಕೊಲೆ ಪ್ರಕರಣ: ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್