ಮನೆ ರಾಜ್ಯ ಮೈಸೂರು: ಸಚಿವ ಭೈರತಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು

ಮೈಸೂರು: ಸಚಿವ ಭೈರತಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು

0

ಮೈಸೂರು: ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಗರಾಭಿವೃದ್ಧಿ ವಿಚಾರವಾಗಿ ಪರಿಶೀಲನಾ ಸಭೆ ನಡೆಸುತ್ತಿರುವ ಸಚಿವ ಭೈರತಿ ಸುರೇಶ್ ಅವರಿಗೆ ರೈತರು ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ನಡೆದಿದೆ.

ಜಲದರ್ಶಿನಿ ಅತಿಥಿಗೃಹದಲ್ಲಿ ಕಾವೇರಿ ಹೋರಾಟದ ಮುಂದಿನ ನಡೆ ಬಗ್ಗೆ ಸಂಘ ಸಂಸ್ಥೆಗಳ ಸಭೆ ನಡೆಸಿದ ನಂತರ ದಿಡೀರನೆ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಹೋಗಬೇಕೆಂದು ಎಲ್ಲ ಮುಖಂಡರು ತೀರ್ಮಾನಿಸ ಸಭೆ ನಡೆಸುತ್ತಿದ್ದ ಜಾಗಕ್ಕೆ ನುಗ್ಗಲು ಯತ್ನಿಸಲಾಯಿತು.

ಆರಂಭದಲ್ಲಿ ಕೆಲವು ರೈತರು ಜಿಲ್ಲಾ ಪಂಚಾಯತಿ ಆವರಣದ ಒಳಗೆ ಜಮಾಯಿಸಿದರು. ನಂತರ ನೂರಾರು ಜನರೊಂದಿಗೆ ನೂರಾರು ಜನರ ತಂಡದೊಂದಿಗೆ ಮುಖಂಡರುಗಳು ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು ಮಾತಿನ ಚಕುಮುಕಿ ನಡೆಸಲಾಯಿತು.

ನಾವು ಸಚಿವರನ್ನ ಪ್ರಶ್ನೆ ಮಾಡಲು ಬಂದಿದ್ದೇವೆ ನೀವು ನಮ್ಮನ್ನು ಯಾಕೆ ತಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಮುಂಜಾತ ಕ್ರಮ ಎಂದು ಬಂಧಿಸಿದರು.

ರೈತ ಮುಖಂಡ ಕುರುಬುರ್ ಶಾಂತಕುಮಾರ್ ಮಾತನಾಡಿ, ರಾಜ್ಯದ ಜನರ ರೈತರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿರುವ ಕಾರಣ ನಾರ್ತ್ ಈಸ್ಟ್ ಮಾನ್ಸೂನ್ ಮಳೆ ತಮಿಳುನಾಡಿಗೆ ಹೆಚ್ಚು ಬರುವ ಕಾರಣ ಕರ್ನಾಟಕ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ನ್ಯಾಯಾಲಯಕ್ಕೆ ತಿಳಿಸಿ, ಈಗ ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸ್ವತಂತ್ರ ಸಂಸ್ಥೆಯಾಗಲಿ ಕಾವೇರಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ ಆದ್ದರಿಂದ ಈಗಿನ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣ ಪ್ರಾಧಿಕಾರ ರದ್ದು ಮಾಡಬೇಕು, ವಿಶೇಷ ನೀತಿ ನಿಯಮಗಳ ರಚಿಸಿ, ನೂತನ ಶಾಸನಬದ್ಧ ಸ್ವತಂತ್ರಪ್ರಾಧಿಕಾರ ರಚಿಸಿ ಕಾವೇರಿ ಅಚ್ಚುಕಟ್ಟು ಭಾಗದ ಎಲ್ಲ ರಾಜ್ಯಗಳ ಪರಿಣಿತರು ವಿಷಯ ಪರಿಣಿತರು ರೈತರು ಒಳಗೊಂಡಂತೆ ರಚನೆ ಆಗಬೇಕು ಚುನಾವಣಾ ಆಯೋಗದ ರೀತಿಯಲ್ಲಿ ಪ್ರತ್ಯೇಕವಾಗಿರಬೇಕು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.

ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳ ಸರ್ಕಾರಗಳು ತಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಮೇಲೆ ಇರುವ ಮುಖದಮೆಗಳನ್ನು ವಾಪಸ್ ಪಡೆದುಕೊಳ್ಳುತ್ತಾರೆ. ಆದರೆ ಕನ್ನಡದ ನೆಲ ಜಲ ವಿಚಾರದಲ್ಲಿ ಹೋರಾಟ ಮಾಡಿದ ನಮ್ಮಗಳ ಮೇಲೆ ಇರುವ ಮೊಕದ್ದಮೆ ಯಾಕೆ ಹಿಂಪಡೆಯುತ್ತಿಲ್ಲ ಇದು ರಾಜಕಾರಣವೇ, ಕನ್ನಡ ಪರ ಸಂಘಟನೆಗಳ ಹಾಗೂ ರೈತ ಸಂಘಟನೆಗಳ ಮುಖಂಡರ ಮೇಲೆ ಇರುವ ಪೊಲೀಸ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಮೀನಾ ಮೆಸಾ ಎಣಿಸುತ್ತಾರೆ ಯಾಕೆ ಕೂಡಲೇ ರಾಜ್ಯ ಸರ್ಕಾರ ಮೊಕಸದ್ದಮೆಗಳನ್ನ ವಾಪಸ್ ಪಡಯಬೇಕು.  ತಮಿಳುನಾಡಿಗೆ ನೀರು ಹರಿಸಿ ರೈತರ ಬಲಿ ಪಡೆದ ರಾಜ್ಯ ಸರ್ಕಾರಕ್ಕೆ ಬಲಿದಾನದ ಪ್ರಶಸ್ತಿ ನೀಡಬೇಕು ಈಗ ಬೆಂಗಳೂರು ಮೈಸೂರಿನ ಜನರ ಬಲಿಪಡೆ ಪಡೆಯಲು ಮುಂದಾಗಿದೆ ಎಂದರು.

ಕರ್ನಾಟಕದ ಕಾವೇರಿ ಜಲ ವಿಚಾರದ ಬಗ್ಗೆ ದೆಹಲಿಯಲ್ಲಿ ನಡೆದ ಸಂಸದರ ಸಭೆಗೆ ಬಾರದೆ ಕರ್ನಾಟಕ ಪ್ರಾತಿನಿಧ್ಯವನ್ನ ಬಲಿಕೊಟ್ಟಿದ್ದಾರೆ  ರಾಜ್ಯಸಭಾ ಸದಸ್ಯರು ಕೇಂದ್ರ ಹಣಕಾಸು ಸಚಿವರು ನಿರ್ಮಲಾ ಸೀತಾರಾಮ್ ನೈತಿಕವಾಗಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿ ಅಥವಾ ಪ್ರಧಾನಿ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಿ ಎಂದು ಒತ್ತಾಯಿಸಿದರು.

ಚಲನಚಿತ್ರ ನಟರು ಚುನಾವಣೆಯಲ್ಲಿ ಸ್ಪರ್ಧಾತ್ಮಕವಾಗಿ ಪ್ರಚಾರಕ್ಕೆ ಬರುತ್ತಾರೆ ಇಂದು ಜನರ ಸಂಕಷ್ಟದ ಸಮಯದಲ್ಲಿ ಹೇಳಿಕೆ ಕೊಟ್ಟರೆ ಸಾಲದು ಹೋರಾಟಕ್ಕೆ ಇಳಿಯಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

ರಾಜ್ಯದ ಪ್ರತಿಷ್ಠಿತ ಮಠಾಧೀಶರು ಕರೆ ಕೊಟ್ಟರೆ ಸರ್ಕಾರವೇ ಬೀದಿಗೆ ಬರುತ್ತದೆ ಈ ಬಗ್ಗೆ ಗಮನ ಸೆಳೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ನಾಳೆ 4:00ಗೆ ಜಲದರ್ಶಿನಿ ಯಲ್ಲಿ ಸಂಘ ಸಂಸ್ಥೆಗಳ ಸಭೆ ನಡೆಸಲು ಹೋರಾಟ ತೀವ್ರ ಗೊಳಿಸಲು ತೀರ್ಮಾನಿಸಲಾಯಿತು.

ಕನ್ನಡ ಚಳುವಳಿ ಮುಖಂಡ ಮೂಗೂರು ನಂಜುಂಡಸ್ವಾಮಿ ಅಮ್ಆದ್ಮಿ ಪಕ್ಷದ ರಂಗಯ್ಯ, ಸಿದ್ದರಾಜು, ಧರ್ಮಶ್ರಿ, ಹೋರಾಟ ಸಮಿತಿ ಸುರೇಶ್ ಗೌಡ, ರೈತ ಮುಖಂಡರಾದ, ಕನ್ನಡ ಚಳುವಳಿ ಹೋರಾಟಗಾರ, ರೈತ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಕೆರೆಹುಂಡಿ ರಾಜಣ್ಣ, ಮುಖಂಡರಾದ ಕೆಂಡಗಣ್ಣ ಸ್ವಾಮಿ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಬಿದರಳ್ಳಿ ಮಾದಪ್ಪ, ಕುರುಬೂರು ಪ್ರದೀಪ್, ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್,ಕಿರಗಸೂರು ಪ್ರಸಾದ್ ನಾಯಕ್, ಮಾರ್ಬಳ್ಳಿ ನೀಲಕಂಠಪ್ಪ, ಸಾತಗಳ್ಳಿ ಬಸವರಾಜ್, ಪಿ ರಾಜು, ಹೆಗ್ಗೋಟರ ಶಿವ ಸ್ವಾಮಿ, ಉಡಿಗಾಲ ರೇವಣ್ಣ, ಗುರುಪ್ರಸಾದ್, ವರಕೋಡು ನಾಗೇಶ್, ಚುಂಚುರಾಯನಹುಂಡಿ ಗಿರೀಶ್, ಸಿದ್ದರಾಮ, ಸತೀಶ್, ಕಾಟೂರು ನಾಗೇಶ್, ಬನ್ನೂರು ಶ್ರೀನಿವಾಸ್, ನೂರಾರು ಜನ ಭಾಗವಹಿಸಿದ್ದರು.

ಹಿಂದಿನ ಲೇಖನಮೈಸೂರು: ಕಲುಷಿತ ನೀರಿನ ಬಗ್ಗೆ ಮಾಹಿತಿ ನೀಡಿ
ಮುಂದಿನ ಲೇಖನಕೈವಾರ