ಮನೆ ರಾಜ್ಯ ಬೆಳಗಾವಿ: ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

ಬೆಳಗಾವಿ: ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

0

ಬೆಳಗಾವಿ(Belagavi): ನವಜಾತ ಗಂಡು ಶಿಶುವನ್ನು ಗುರುವಾರ ನಸುಕಿನಲ್ಲಿ ಪಾಲಕರು  ಬಿಟ್ಟು ಹೋಗಿರುವ ಘಟನೆ ನಿಪ್ಪಾಣಿ ಪಟ್ಟಣ ಹೊರವಲಯದಲ್ಲಿ ನಡೆದಿದೆ.

ಬೆಳಿಗ್ಗೆ ಈ ಮಾರ್ಗದಲ್ಲಿ ಹೊಲದ ಕೆಲಸಕ್ಕೆ ಹೋದ ಕಾರ್ಮಿಕರಿಗೆ ಹಸುಳೆ ಅಳುವ ಧ್ವನಿ ಕೇಳಿಸಿದೆ.

ರಸ್ತೆ ಪಕ್ಕದ ಜಮೀನಿನಲ್ಲಿ ಹೋಗಿ ನೋಡಿದಾಗ ಪ್ಲಾಸ್ಟಿಕ್‌ ವೈರಿನಿಂದ ಹೆಣೆದ ಬುಟ್ಟಿಯಲ್ಲಿ ಹಸುಳೆ ಇರುವುದು ಗೊತ್ತಾಗಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಹಸುಳೆಯನ್ನು ರಕ್ಷಣೆ ಮಾಡಿ, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಪ್ಪಾಣಿ ಸಿಡಿಪಿಒ ಕಚೇರಿಯ ಸಿಬ್ಬಂದಿ ಸುಪರ್ದಿಗೆ ಪಡೆದರು.

ಮೈ ಕೊರೆಯುವ ಚಳಿಯಲ್ಲಿ ಬಿಟ್ಟುಹೋಗಿದ್ದರಿಂದ ಶಿಶು ನಿತ್ರಾಣಗೊಂಡಿದ್ದು, ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದೆ ಎಂದು ತಾಲ್ಲೂಕು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಪ್ರಕರಣ ಕೈಬಿಡಲು ಲಂಚ ಪಡೆಯುತ್ತಿದ್ದ ಕಾನ್ಸ್’ಟೇಬಲ್ ಲೋಕಾಯುಕ್ತ ಬಲೆಗೆ
ಮುಂದಿನ ಲೇಖನವಿದ್ಯುತ್ ದರ ನಿಗದಿ ನಿಯಮ ರೂಪಿಸಿ: ಎಲ್ಲಾ ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ಸುಪ್ರೀಂ ನಿರ್ದೇಶನ