ಮನೆ ಸುದ್ದಿ ಜಾಲ ಕೋವಿನ್ ಪೋರ್ಟಲ್ ನಿಂದ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಆರೋಗ್ಯ ಸಚಿವಾಲಯ ಸ್ಪಷ್ಟನೆ

ಕೋವಿನ್ ಪೋರ್ಟಲ್ ನಿಂದ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಆರೋಗ್ಯ ಸಚಿವಾಲಯ ಸ್ಪಷ್ಟನೆ

0

ನವದೆಹಲಿಭಾರತೀಯರ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಇಂದು ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯ, ಕೋವಿನ್ ಪೋರ್ಟಲ್ ನಿಂದ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. 

20,000ಕ್ಕೂ ಅಧಿಕ ಭಾರತೀಯರ ಕೊರೊನಾ ಸಂಬಂಧಿತ ಖಾಸಗಿ ಮಾಹಿತಿ ಆನ್ ಲೈನಿನಲ್ಲಿ ಸೋರಿಕೆಯಾಗಿದ್ದು, ಕೆಲ ಜಾಲತಾಣಗಳಲ್ಲಿ ಈ ದಾಖಲೆಗಳನ್ನು ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರ ಮಾಹಿತಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಭಾರತೀಯರ ಖಾಸಗಿ ಮಾಹಿತಿ ಸೋರಿಕೆ ಕುರಿತಾದ ವರದಿಗಳು ಸುಳ್ಳು ಎಂದಿರುವ ಆರೋಗ್ಯ ಸಚಿವಾಲಯ ಕೋವಿನ್ ಪೋರ್ಟಲ್ ನಲ್ಲಿ ಭಾರತೀಯರ ವಿಳಾಸ ಮತ್ತು ಕೊರೊನಾ ಪರೀಕ್ಷಾ ಫಲಿತಾಂಶ ಮಾಹಿತಿ ಸಂಗ್ರಹಿಸುವುದಿಲ್ಲ ಎಂದಿದೆ.

ಹಿಂದಿನ ಲೇಖನಕಳ್ಳತನ ಪ್ರಕರಣ: ನಾಲ್ವರ ಬಂಧನ; 6 ದ್ವಿ ಚಕ್ರ ವಾಹನ, 30 ಗ್ರಾಂ ಚಿನ್ನ ವಶಕ್ಕೆ
ಮುಂದಿನ ಲೇಖನಈ ವರ್ಷ ‘ಕೊರೋನಾ ಪಾಸ್’ ಇಲ್ಲ: ಸಚಿವ ಬಿ.ಸಿ.ನಾಗೇಶ್