ಮನೆ ಸುದ್ದಿ ಜಾಲ ಕಬ್ಬಿಣದ ರಥಕ್ಕೆ ವಿದ್ಯುತ್ ತಂತಿ ತಗುಲಿ ಓರ್ವ ಸಾವು, 13 ಜನರಿಗೆ ಗಾಯ

ಕಬ್ಬಿಣದ ರಥಕ್ಕೆ ವಿದ್ಯುತ್ ತಂತಿ ತಗುಲಿ ಓರ್ವ ಸಾವು, 13 ಜನರಿಗೆ ಗಾಯ

0

ದಾವಣಗೆರೆ(Davanagere): ದುರ್ಗಾದೇವಿ ಜಾತ್ರೆಯಲ್ಲಿ ಕಬ್ಬಿಣದ ರಥಕ್ಕೆ ವಿದ್ಯುತ್‌ ತಂತಿ ತಗುಲಿದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಕೆಂಗಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ವಿದ್ಯುತ್‌ ಆಘಾತದಿಂದ ಕೆಂಗಾಪುರದ ಅರ್ಜುನ್‌ (23) ಮೃತಪಟ್ಟಿದ್ದಾರೆ. ಅದೇ ಗ್ರಾಮದ ಕಾರ್ತಿಕ್‌ ಎಂಬ ಯುವಕ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಉಳಿದ 12 ಜನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಿ ವರ್ಷದಂತೆ ದುರ್ಗಾದೇವಿ ಜಾತ್ರೆ ನಡೆಯುತ್ತಿತ್ತು.  ಬೆಳಿಗ್ಗೆ ರಥೋತ್ಸವ ಆರಂಭಗೊಂಡಾಗ ವಿದ್ಯುತ್‌ ತಂದಿಯು ರಥಕ್ಕೆ ತಗುಲಿದೆ. ಕಬ್ಬಿಣದಿಂದ ರಥವನ್ನು ನಿರ್ಮಿಸಿರುವುದರಿಂದ ವಿದ್ಯುತ್‌ ಸ್ಪರ್ಶವಾಗಿ ಅವಘಡ ಸಂಭವಿಸಿದೆ.

ಹಿಂದಿನ ಲೇಖನನೈತಿಕ ಹೊಣೆ ಹೊತ್ತು ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿ: ಬಡಗಲಪುರ ನಾಗೇಂದ್ರ
ಮುಂದಿನ ಲೇಖನಭ್ರಷ್ಟಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಕಾಮಗಾರಿ ಸ್ಥಗಿತ: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ