ಮನೆ ಸಾಹಿತ್ಯ ಕಣ್ಣಾಲಿಯೊಳಗಿನ ನೋವು- ಕವನ ಸುದ್ದಿ ಜಾಲಸಾಹಿತ್ಯ ಕಣ್ಣಾಲಿಯೊಳಗಿನ ನೋವು- ಕವನ July 6, 2022 0 Share WhatsAppTelegramFacebookTwitterEmail ಕಂಗಳ ದಂಡೆಯೂ ಒಂದರ್ಥದಿ ತಡೆಗೋಡೆ ಉಕ್ಕುವ ಕಂಬನಿ ಅಲೆಗಳ ತಡೆತಡೆದು ಎದೆಯ ಕಲ್ಲಾಗಿಸುತ ಗುಂಡಿಗೆಯನಾಗಿಸುವುದು ಅಕ್ಷರಶಃ ಕಲ್ಲುಬಂಡೆ. ತಡೆಯಲು ಸೋತ ಕಣ್ಣಾಲಿಗಳಿಗಷ್ಟೇ ಗೊತ್ತು ಕಂಬನಿಯ ಪ್ರಖರತೆ. ಕುದಿದು ಕುದಿದು ಹೊರಬಂದು ಸುರಿದ ಕಣ್ಣೀರಿಗಷ್ಟೇ ಗೊತ್ತು ನೋವಿನ ತೀವ್ರತೆ.