ಮನೆ ಸುದ್ದಿ ಜಾಲ ಮೈಸೂರಿನಲ್ಲಿ ರೌಡಿಶೀಟರ್’ಗಳ ಪೆರೇಡ್: ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ

ಮೈಸೂರಿನಲ್ಲಿ ರೌಡಿಶೀಟರ್’ಗಳ ಪೆರೇಡ್: ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ

0

ಮೈಸೂರು:  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ  ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸಮ್ಮುಖದಲ್ಲಿ ರೌಡಿಶೀಟರ್ ಗಳ ಪೆರೇಡ್ ನಡೆಸಲಾಯಿತು.

ಹೆಬ್ಬಾಳು ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಶೀಟರ್ ಗಳ ಪೆರೇಡ್ ನಡೆಸಲಾಗಿದ್ದು ಮೈಸೂರಿನ ವಿವಿಧ ಪೊಲೀಸ್ ಠಾಣೆಗಳ 76 ರೌಡಿಶೀಟರ್ ಗಳು ರೌಡಿಗಳ ಪೆರೇಡ್ ನಲ್ಲಿ ಭಾಗಿಯಾಗಿದ್ದರು.

ಮಾತನಾಡಿ, ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿ ಶೀಟರ್’ಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಖಡಕ್ ವಾರ್ನಿಂಗ್ ನೀಡಿದರು. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಮೈಸೂರಿನಿಂದ ಗಡಿಪಾರು ಮಾಡುವುದಾಗಿ ಎಚ್ಚರಿಕೆ‌ ನೀಡಿದರು.

ಡಿಸಿಪಿಗಳಾದ ಮುತ್ತುರಾಜ್, ಜಾನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿಗಳ ಪೆರೇಡ್ ನಡೆಸಿದ ವೇಳೆ ಉಪಸ್ಥಿತರಿದ್ದರು.

ಹಿಂದಿನ ಲೇಖನನನ್ನ ನಾನು ತಿಳಿಯುವುದೆಂತು ?
ಮುಂದಿನ ಲೇಖನಬಿಬಿಸಿ ‘ಭ್ರಷ್ಟ ಬಕ್ವಾಸ್ ಕಾರ್ಪೊರೇಷನ್’: ಬಿಜೆಪಿ ವಾಗ್ದಾಳಿ