ಮನೆ ಸುದ್ದಿ ಜಾಲ ಚಾಮುಂಡಿಬೆಟ್ಟಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ: ಭರದಿಂದ ಸಾಗಿದ ಸಿದ್ಧತೆ

ಚಾಮುಂಡಿಬೆಟ್ಟಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ: ಭರದಿಂದ ಸಾಗಿದ ಸಿದ್ಧತೆ

0

ಮೈಸೂರು (Mysuru): ಜೂನ್‌ 21 ರಂದು ಮೈಸೂರಿನಲ್ಲಿ ನಡೆಯಲಿರುವಅಂತಾರಾಷ್ಟ್ರೀಯ ಯೋಗದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಚಾಮುಂಡಿಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ. ಹೀಗಾಗಿ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ ಬರದಿಂದ ಸಾಗಿದೆ.

ಬೆಟ್ಟದ ರಸ್ತೆಗೆ ಎಲ್‌ಇಡಿ ದೀಪ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ತಾವರೆಕಟ್ಟೆಯಿಂದ ಚಾಮುಂಡಿಬೆಟ್ಟದವರೆಗೆ ಒಟ್ಟು 150 ಬೀದಿ ದೀಪದ ಕಂಬಗಳನ್ನು ಅಳವಡಿಸಿ ಎಲ್ಇಡಿ ಬಲ್ಬ್ ಹಾಕಲಾಗುತ್ತಿದೆ. ಈ ಮೂಲಕ ಸಾರ್ವಜನಿಕರು ಸಂಚರಿಸಲು ರಾತ್ರಿ ವೇಳೆ ಅನುಕೂಲ ಕಲ್ಪಿಸಲೆಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾವರೆಕಟ್ಟೆಯಿಂದ ಚಾಮುಂಡಿಬೆಟ್ಟ ಗ್ರಾಮದವರೆಗೆ ಪ್ರತಿ 20 ಮೀಟರ್‌ ಗೊಂದರಂತೆ ಆರ್‌ಸಿ ಕಂಬಕ್ಕೆ ಎಲ್ಇಡಿ ಬಲ್ಬ್ ಅಳವಡಿಸಲು ಲೋಕೋಪಯೋಗಿ ಇಲಾಖೆ, ಜಿಪಂ ಹಾಗೂ ಸೆಸ್ಕ್‌ ಮುಂದಾಗಿದೆ.

ಚಾಮುಂಡಿಬೆಟ್ಟದ ರಸ್ತೆ ಬದಿಯಲ್ಲಿ ಬಿಎಸ್‌ಎನ್‌ಎಲ್‌ ಕೇಬಲ್‌ ಹಾದು ಹೋಗಿರುವುದಲ್ಲದೆ, ಕೆಲವೆಡೆ ಬಂಡೆ, ಕಲ್ಲುಸಿಗುತ್ತಿರುವ ಕಾರಣ ಗುಂಡಿ ತೆಗೆಯಲು ತೊಂದರೆಯಾಗುತ್ತಿದೆ. ಆದ್ದರಿಂದ ಬಿಎಸ್‌ಎನ್‌ಎಲ್‌ ಅಧಿಕಾರಿಗಳನ್ನು ಕರೆಸಿ ಕೇಬಲ್‌ ಹಾದು ಹೋಗಿರುವ ಗುರುತು ಮಾಡಿಸಿಕೊಂಡು ಕೇಬಲ್‌ಗೆ ಡ್ಯಾಮೇಜ್‌ ಆಗದಂತೆ ಗುಂಡಿ ತೆಗೆಯುವ ಕೆಲಸ ಮುಂದುವರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಈಗಾಗಲೇ ಸಾಲು ದೀಪಗಳು ಇವೆ. ಮತ್ತೆ ಅದನ್ನು ಹೆಚ್ಚಿಸುವ ಅವಶ್ಯಕತೆ ಇಲ್ಲ. ಈ ರಸ್ತೆಯಲ್ಲಿ ರಾತ್ರಿ ವೇಳೆ ಯಾರೂ ನಡೆದು ಓಡಾಡುವುದಿಲ್ಲ, ವಾಹನಗಳು ಮಾತ್ರ ಸಂಚರಿಸುತ್ತವೆ. ಅವುಗಳಿಗೆ ಅವುಗಳದ್ದೇ ಆದ ದೀಪದ ವ್ಯವಸ್ಥೆ ಇರುತ್ತದೆ. ಹಾಗಾಗಿ ರಸ್ತೆ ದೀಪಗಳು ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೇ ಇದು ಸಂರಕ್ಷಿತ ಅರಣ್ಯ ಪ್ರದೇಶವಾದ್ದರಿಂದ ಇಲ್ಲಿ ದೀಪದ ವ್ಯವಸ್ಥೆ ಮಾಡುವುದರಿಂದ ವನ್ಯಜೀವಿಗಳಿಗೆ, ಅವುಗಳ ಸಹಜ ಬದುಕಿಗೆ ತೊಂದರೆ ಆಗುತ್ತದೆ ಎಂದು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನರಾಜ್ಯ ಸರ್ಕಾರದ 21 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಮುಂದಿನ ಲೇಖನವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ