ಮನೆ ಕವನ ನಯನ ಮಿಲನ – ಕವನ

ನಯನ ಮಿಲನ – ಕವನ

0

ಅವಳು ಹಾದಿಯುದ್ದಕೂ

ಅದೆಷ್ಟೇ ಲಜ್ಜೆ ಲಾವಣ್ಯದಿ

ತಲೆ ತಗ್ಗಿಸಿ ನಡೆದರೂ

ತಲುಪಿದೊಡನೆ ರಸ್ತೆ ಕೊನೆಗೆ,

ನಸುನಗುತ ಹೊರಳಿಯೊಮ್ಮೆ

ನೋಡಲೇಬೇಕು ಕಡೆಗೆ

ಜಾತಕ ಪಕ್ಷಿಯಂತೆ ಕಾಯ್ದು

ಚಡಪಡಿಸಿ ನಿಂತ ಅವನೆಡೆಗೆ

  • ಎ.ಎನ್. ಆರ್