ಮೈಸೂರು : ಮೈಸೂರನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಬದ್ರಹ್ಮವಿದ್ಯಾ ವತಿಯಿಂದ ಇಂದು ಶನಿವಾರ (ಮೇ 9ರಂದು) ‘ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ’ ಹಾಗೂ ಡಾ. ರಾ ಸತ್ಯನಾರಾಯಣ ಅವರ ‘ಶತಮಾನೋತ್ಸವ’ದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ವಿಶ್ವ ವಿದ್ಯಾಲಯದ ನಾಲ್ವಡಿ ಕೃಷ್ಣರಾಜ ಒಡೆಯರ ಭವನದಲ್ಲಿ (ಸೆನೆಟ್ ಹಾಲ್) ಸಂಜೆ 5.30ಕ್ಕೆ ಜರುಗಲಿದೆ.
ಶತಮಾನ ರಾಸ ಅಭಿವೃದ್ಧಿ ಪೂರ್ವದ ಉದ್ಘಾಟನೆ, ಸನ್ಮಾನ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿವೆ. ಇಂದು ಸಂಜೆ 5.30ರಿಂದ 6.15ರವರೆಗೆ ಮಹಾಮಹೋಪಾಧ್ಯಾಯ ಡಾ.ರಾ.ಸ ಸತ್ಯಾನಾರಯಣರ ವಿಶೇಷ ಕೃತಿಗಳ ಗೋಷ್ಠಿ ಗಾಯನ ಹಾಗೂ ಡಾ.ಅಹಲ್ಯ ಶರ್ಮರಿಂದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಂಗೀತ ವಿಶ್ವ ವಿದ್ಯಾಲಯದ ಕುಲಪತಿ ಡಾ.ಅಹಲ್ಯ ಶರ್ಮ ಅವರು ನೆರವೇರಿಸಲಿದ್ದಾರೆ.
ವಾರಣಾಸಿಯ ಐಜಿಎನ್ಸಿಎ ಮಾಜಿ ನಿರ್ದೇಶಕರಾದ ಡಾ.ವಿಜಯ್ ಶಂಕರ್ ಶುಕ್ಲಾ ಅವರ ಅತಿಥಿ ಸಾನಿಧ್ಯವಿರಲಿದೆ. ಹಂಪಿಯ ಆನೆಗೊಂದಿ ಸಂಸ್ಥಾನದ ಪಟ್ಟದ ರಾಜ ಮಹಾರಾಜ ಶ್ರೀಕೃಷ್ಣ ದೇವರಾಯ, ಎಸ್ವಿವೈಎಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸವಿತಾ ಸುಲುಗೋಡು, ಮೈಸೂರಿನ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ, ಮೈಸೂರು ಅರಮನೆ ಬೋರ್ಡ್ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
















