ಮನೆ ಅಪರಾಧ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ಟಿಪ್ಪರ್ ಲಾರಿ- ಬಸ್: ಆರು ಮಂದಿ ಸಜೀವ ದಹನ

ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ಟಿಪ್ಪರ್ ಲಾರಿ- ಬಸ್: ಆರು ಮಂದಿ ಸಜೀವ ದಹನ

0

ತೆಲಂಗಾಣ: ಬಸ್ಸೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಆರು ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Join Our Whatsapp Group

ಬಾಪಟ್ಲಾ ಜಿಲ್ಲೆಯ ಚಿನ್ನಗಂಜಾಂನಿಂದ ಹೈದರಾಬಾದ್‌ ಗೆ ತೆರಳುತ್ತಿದ್ದ ಬಸ್ಸೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ಘಟನೆ ಚಿಲ್ಕಲೂರಿಪೇಟೆಯಲ್ಲಿ ಬುಧವಾರ ನಡೆದಿದೆ.

ಗಾಯಾಳುಗಳಿಗೆ ಚಿಲಕಲೂರಿಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಗುಂಟೂರಿಗೆ ಶಿಫಾರಸು ಮಾಡಲಾಗಿದೆ.

ಮೃತರನ್ನು ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ನಿವಾಸಿಗಳಾದ ಅಂಜಿ (35), ಉಪ್ಪಗುಂದೂರು ಕಾಶಿ (65), ಉಪ್ಪುಗುಂದೂರು ಲಕ್ಷ್ಮಿ (55), ಮತ್ತು ಮುಪ್ಪರಾಜು ಖ್ಯಾತಿ ಸಾಯಿಶ್ರೀ (8) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ.

ಬಸ್ಸಿನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು ಮತ ಚಲಾಯಿಸಿದ ಬಳಿಕ ಬಸ್​ನಲ್ಲಿ ಒಟ್ಟು 42 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಲಾರಿ ಚಾಲಕ ಮತ್ತು ಇತರೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಲಕಲೂರಿಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಮಂಡಲದಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ಬಾಪಟ್ಲಾ ಜಿಲ್ಲೆಯ ಚಿನ್ನಗಂಜಾಂನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಹುಬ್ಬಳ್ಳಿ: ಚೂರಿಯಿಂದ ಇರಿದು ಯುವತಿಯನ್ನು ಹತ್ಯೆಗೈದ ಯುವಕ
ಮುಂದಿನ ಲೇಖನರಾಜಸ್ಥಾನ: ಗಣಿಯ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ