ಮನೆ ಅಪರಾಧ ಟೋಲ್ ಪಡೆಯುವ ವಿಚಾರಕ್ಕೆ ಗಲಾಟೆ: ಓರ್ವನ ಹತ್ಯೆ

ಟೋಲ್ ಪಡೆಯುವ ವಿಚಾರಕ್ಕೆ ಗಲಾಟೆ: ಓರ್ವನ ಹತ್ಯೆ

0

ರಾಮನಗರ: ಟೋಲ್​ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Join Our Whatsapp Group

ರಾಮನಗರ ‌ತಾಲೂಕಿನ ಶೇಷಗಿರಿಹಳ್ಳಿ‌ ಟೋಲ್ ಪ್ಲಾಜಾ ಬಳಿ ಟೋಲ್​ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಮಾರಾಮಾರಿಯಾಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಯುವಕರು ಟೋಲ್​ ಮನಲ್ಲಿ ಕೆಲಸ ಮಾಡ್ತಿದ್ದ ಪವನ್ ​ಕುಮಾರ್​(26) ಹತ್ಯೆ ಮಾಡಿದ್ದಾರೆ.

ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಟೋಲ್ ಬಳಿ ಗಲಾಟೆ ನಡೆದಿತ್ತು. ಬಳಿಕ ರಾತ್ರಿ 12 ಗಂಟೆಗೆ ಕೆಲಸ ಮುಗಿಸಿಕೊಂಡು ಊಟಕ್ಕೆಂದು ಪವನ್ ಹೊರಟ್ಟಿದ್ದ. ಈ ವೇಳೆ ಪವನ್​ ನನ್ನು ಹಿಂಬಾಲಿಸಿದ ಯುವಕರು ಆತನ ಮೇಲೆ ಹಾಕಿ ಸ್ಟಿಕ್ ​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಹತ್ಯೆ ಮಾಡಿದ ಆರೋಪಿಗಳಿಗಾಗಿ ಬಿಡದಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.

ಹಿಂದಿನ ಲೇಖನಏಪ್ರಿಲ್​ ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ
ಮುಂದಿನ ಲೇಖನಡಿವೈಡರ್ ದಾಟಿ ಪಲ್ಟಿಯಾದ ಕಾರು ಮತ್ತೊಂದು ಕಾರಿಗೆ ಢಿಕ್ಕಿ