ಮನೆ ಕ್ರೀಡೆ ಏರ್​ಥಿಂಗ್​ ಮಾಸ್ಟರ್ಸ್​ ಟೂರ್ನಿಯ ನಾಕೌಟ್​ ಹಂತ ತಲುಪುವಲ್ಲಿ ಆರ್​.ಪ್ರಜ್ಞಾನಂದ್ ವಿಫಲ

ಏರ್​ಥಿಂಗ್​ ಮಾಸ್ಟರ್ಸ್​ ಟೂರ್ನಿಯ ನಾಕೌಟ್​ ಹಂತ ತಲುಪುವಲ್ಲಿ ಆರ್​.ಪ್ರಜ್ಞಾನಂದ್ ವಿಫಲ

0

ತಮಿಳುನಾಡು: ಭಾರತದ ಲಿಟಲ್​ ಗ್ರ್ಯಾಂಡ್​ ಮಾಸ್ಟರ್​ ತಮಿಳುನಾಡಿನ ಆರ್​.ಪ್ರಜ್ಞಾನಂದ್​ ಏರ್​ಥಿಂಗ್​ ಮಾಸ್ಟರ್ಸ್​ ಆನ್​ಲೈನ್​ ರ್ಯಾಪಿಡ್​ ಚೆಸ್​ ಪಂದ್ಯಾವಳಿಯಲ್ಲಿ ನಾಕೌಟ್​ ಹಂತಕ್ಕೆ ತಲುಪುವಲ್ಲಿ ವಿಫಲವಾಗಿದ್ದಾರೆ.

ಪ್ರಜ್ಞಾನಂದ್​ ಅವರು ಅಂಕಪಟ್ಟಿಯಲ್ಲಿ 11ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ರೌಂಡ್-ರಾಬಿನ್ ಹಂತದಿಂದ ಕೇವಲ 8 ಮಂದಿ ಮಾತ್ರ ನಾಕೌಟ್‌ಗೆ ಅರ್ಹತೆ ಪಡೆದರು. ಇದಕ್ಕೂ ಮುನ್ನ ಪ್ರಜ್ಞಾನಂದ್​ ಟೂರ್ನಿಯ 8 ನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿ ಎಲ್ಲರ ಹುಬ್ಬೇರಿಸಿದ್ದರು.

16 ವರ್ಷದ ಆರ್.ಪ್ರಜ್ಞಾನಂದ್​ 10 ಮತ್ತು 12 ನೇ ಸುತ್ತುಗಳಲ್ಲಿ ಆಂಡ್ರೆ ಎಸಿಪೆಂಕೊ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಜಯಿಸಿದರು. ಆದರೆ, ನೋಡಿರ್ಬೆಕ್ ಅಬ್ದುಸತ್ತೊರೊವ್ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದರು.