ಮನೆ ಕಾನೂನು ವಿಮೆಯುಳ್ಳ ವಾಹನವನ್ನು ಓಡಿಸಲು ಪಡೆದ ವ್ಯಕ್ತಿಗೆ ಅಪಘಾತದ ಪರಿಹಾರ ಲಭ್ಯವಿರುವುದಿಲ್ಲ: ಗುವಾಹಟಿ ಹೈಕೋರ್ಟ್‌

ವಿಮೆಯುಳ್ಳ ವಾಹನವನ್ನು ಓಡಿಸಲು ಪಡೆದ ವ್ಯಕ್ತಿಗೆ ಅಪಘಾತದ ಪರಿಹಾರ ಲಭ್ಯವಿರುವುದಿಲ್ಲ: ಗುವಾಹಟಿ ಹೈಕೋರ್ಟ್‌

0

ವಾಹನ ಅಪಘಾತದ ಪ್ರಕರಣಗಳಲ್ಲಿ ವಿಮೆ ಹೊಂದಿದ ವಾಹನವನ್ನು ಓಡಿಸಲೆಂದು ಪಡೆದ ವಾಹನದ ವಿಮಾದಾರರಲ್ಲದವರನ್ನು ಮೂರನೇ ವ್ಯಕ್ತಿ (ಥರ್ಡ್‌ ಪಾರ್ಟಿ) ಎಂದು ಪರಿಗಣಿಸಿ ಅವರಿಗೆ ವಿಮೆಯ ಪರಿಹಾರವನ್ನು ವೈಯಕ್ತಿಕ ಅಪಘಾತ ರಕ್ಷಣೆಯಡಿ ನೀಡಲಾಗದು ಎಂದು ಗುವಾಹಟಿ ಹೈಕೋರ್ಟ್‌ ಇತ್ತೀಚೆಗೆ ಪ್ರಕರಣವೊಂದರಲ್ಲಿ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಮಾಲಾಶ್ರೀ ನಂದಿ ಅವರು ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯು ವಿಮೆ ಹೊಂದಿರುವವಿಗೆ ಮಾತ್ರ ಸೌಲಭ್ಯ ನೀಡಲು ರೂಪುಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಮೋಟಾರು ವಿಮೆಗಾಗಿ ಭರಿಸಲಾದ ಪ್ರೀಮಿಯಂ ಮೊತ್ತವು ವೈಯಕ್ತಿಕ ಅಪಘಾತ ಪರಿಹಾರಕ್ಕಾಗಿ ಪಾವತಿಸಿರುವುದನ್ನು ನ್ಯಾಯಾಲಯವು ಪರಿಗಣಿಸಿತು. “ವಾಹನದ ನೊಂದಾಯಿತ ಮಾಲೀಕರಿಂದ ವಾಹನವನ್ನು ಪಡೆದು ಚಲಾಯಿಸಿರುವ ವ್ಯಕ್ತಿಗೆ ಪರಿಹಾರ ನೀಡುವ ಹೊಣೆಯನ್ನು ವಿಮಾ ಸಂಸ್ಥೆಯ ಮೇಲೆ ಹೊರಿಸಲಾಗದು” ಎಂದು ನ್ಯಾಯಾಲಯವು ಹೇಳಿತು.

ದ್ವಿಚಕ್ರ ವಾಹನದ ನೊಂದಾಯಿತ ಮಾಲೀಕರಿಂದ ಮತ್ತೊಬ್ಬರು ವಾಹನ ಪಡೆದು ಓಡಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು. ಪ್ರಕರಣದಲ್ಲಿ ವಾಹನವನ್ನು ಓಡಿಸಲು ಪಡೆದವರನ್ನು ಥರ್ಡ್‌ ಪಾರ್ಟಿ ಎಂದು ಮೋಟಾರು ವಾಹನ ಕಾಯಿದೆಯಡಿ ಕರೆಯಲಾಗದು ಹಾಗೂ ಥರ್ಡ್‌ ಪಾರ್ಟಿಗೆ ನೀಡುವ ವಿಮಾ ಸೌಲಭ್ಯ ನೀಡಲಾಗದು. ಇಂತಹ ಪ್ರಕರಣಗಳಲ್ಲಿ ಪರಿಹಾರವನ್ನು ನೀಡುವುದು ವಾಹನ ಮಾಲೀಕರ ಹೊಣೆಯಾಗಿರುತ್ತದೆ ಎನ್ನುವುದು ವಿಮಾ ಕಂಪೆನಿಯ ವಾದವಾಗಿತ್ತು.

ಹಿಂದಿನ ಲೇಖನಕೇಂದ್ರ ಬಜೆಟ್ 2022: ಇಂದಿನ ಬಜೆಟ್ ಭಾರತದ ಮುಂದಿನ 25 ವರ್ಷಗಳಿಗೆ ಮಾರ್ಗದರ್ಶಿ; ವಿತ್ತ ಸಚಿವೆ ಸೀತಾರಾಮನ್
ಮುಂದಿನ ಲೇಖನಭಾರೀ ಬೆಲೆಗೆ ‘ಗಾಳಿಪಟ-2’ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟ