ಮನೆ ಕಾನೂನು SC ST ದೌರ್ಜನ್ಯ ಪ್ರಕರಣ: ದೂರು ಪರಿಶೀಲಿಸಿದ ನಂತರವೇ ಪ್ರಕರಣದ ದಾಖಲಿಸಲು ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

SC ST ದೌರ್ಜನ್ಯ ಪ್ರಕರಣ: ದೂರು ಪರಿಶೀಲಿಸಿದ ನಂತರವೇ ಪ್ರಕರಣದ ದಾಖಲಿಸಲು ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

0

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಆಧಾರದಲ್ಲಿ ದಾಖಲಿಸುವ ಮುನ್ನ ಅಧಿಕಾರಿಯ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

Join Our Whatsapp Group

ಬಾಗಲಕೋಟೆಯ ಶಾಲೆಯೊಂದರ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಕೆರಕಲಮಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಮಹತ್ವದ ಸೂಚನೆ ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯ ದುರುಪಯೋಗ ಆಗುತ್ತಿದೆ. ಈ ಕಾಯ್ದೆಯಡಿ ನಕಲಿ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಈ ನಕಲಿ ಪ್ರಕರಣಗಳ ರಾಶಿಯ ಮಧ್ಯೆ ಅಸಲಿ ಪ್ರಕರಣವನ್ನು ಹೂಡುವುದು ಸೂಜಿ ಹುಡುಕಿದಂತಾಗಿದೆ. ಬಹುತೇಕ ಪ್ರಕರಣಗಳು ಹಾಲಿ ಪ್ರಕರಣದಂತೆ ಕಾನೂನಿನ ದುರ್ಬಳಕೆಯಾಗಿವೆ ಎಂದು ಖೇದ ವ್ಯಕ್ತಪಡಿಸಿದೆ.

ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸುವ ಅಧಿಕಾರಿ, ಮೊದಲು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಸದರಿ ಈ ಪ್ರಕರಣ ಅಧಿಕಾರಿಗಳ ಕಣ್ಣು ತೆರೆಸುವ ಮಾದರಿ ಪ್ರಕರಣವಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ:

ಶ್ರೀ ಮರಡಿ ಮಲ್ಲೇಶ್ವರ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಶಿವಲಿಂಗಪ್ಪ ಕೆರೆಮಲಮಟ್ಟಿ ಅವರು ಕರ್ತವ್ಯಕ್ಕೆಂದು ಶಾಲೆಗೆ ಹೋಗುತ್ತಿದ್ದ ವೇಳೆ ಶಿವಲಿಂಗಪ್ಪ ಮತ್ತು ಇತರ ಿಬ್ಬರು ತಮ್ಮನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸೈಕಲ್ ಚೈನ್ ನಿಂದ ದಾಳಿ ನಡೆಸಿದ್ದರು ಎಂದು ಚಂದ್ರ ರಾಠೋಡ್ ಪೊಲೀಸರಿಗೆ ದೂರು ನೀಡಿದ್ದರು.

ಅವರ ದೂರನ್ನು ದಾಖಲಿಸಿದ ಪೊಲೀಸರು ಭಾರತೀಯ ದಂಡ ಸಂಹಿತೆ 323, 342, 504 ಮತ್ತು 506 ಸೆಕ್ಷನ್ ಅಡಿಯಲ್ಲಿ ಶಿವಲಿಂಗಪ್ಪ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು.

ದೂರುದಾರ ಚಂದ್ರರಾಠೋಡ್ ಅವರು ಶಿವಲಿಂಗಪ್ಪ ವಿರುದ್ಧ ವರ್ಷದ್ಲ್ಲಿ ಮೂರು ಬಾರಿ ದೂರು ನೀಡಿದ್ದರು. ಅಲ್ಲದೇ ರಾಠೋಡ್ ಅವರು ಸಮಾಜ ಕಲ್ಯಾಣ ಇಲಾಖೆಯ ಫಲಾನುಭವಿ ಆಗಿದ್ದು, ಇಲಾಖೆಯಿಂದ 3.5 ಲಕ್ಷ ರೂ ಅನುದಾನ ಪಡೆದಿದ್ದರು. ನಕಲಿ ಪ್ರಕರಣಗಳಿಗೆ ನೆರವಾಗಲು ಸಾರ್ವಜನಿಕರ ಹಣವನ್ನು ನೀಡಲಾಗಿದೆ ಎಂಬುದು ದಾಖಲೆಗಳ ಮೂಲಕ ಸಾಬೀತಾಗಿದೆ.

ಸರ್ಕಾರದ ಸಹಾಯದಿಂದ ನಕಲಿ ಪ್ರಕರಣಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ಆಕ್ಷೇಪಾರ್ಹ ಪ್ರಕ್ರಿಯೆ ನಡೆಸಲು ದೂರುದಾರನಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿರುವ ಹಣವನ್ನು ದೂರುದಾರ ಚಂದ್ರು ರಾಠೋಡ್ ಅವರಿಂದ ವಸೂಲಿ ಮಾಡುವಂತೆ ಇಲಾಖೆಗೆ ಆದೇಶ ನೀಡಿದೆ.

ಇಂತಹ ಪ್ರಕರಣಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ನೈಜ ಪ್ರಕರಣಗಳಿಗೆ ಹಿನ್ನಡೆ ಆಗುತ್ತಿದೆ. ನಕಲಿ ಪ್ರಕರಣಗಳಿಂದ ನೈಜ ಪ್ರಕರಣಗಳು ಕಳೆದುಹೋಗುತ್ತಿವೆ. ಈ ನೆಲೆಯಲ್ಲಿ ಸಹಾಯಧನ ನೀಡುವುದಕ್ಕೂ ಮುನ್ನ ದಾಖಲೆಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಹಿಂದಿನ ಲೇಖನಮೈಸೂರು: ತರಬೇತಿ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳ ಭೇಟಿ ಪರಿಶೀಲನೆ
ಮುಂದಿನ ಲೇಖನಕಾರ್ ರೇಸ್ ನಲ್ಲಿ ಟ್ರ್ಯಾಕ್‌ ತಪ್ಪಿ ಜನರ ಮೇಲೆ ಹರಿದ ಕಾರು: 7 ಮಂದಿ ಸಾವು, 20 ಮಂದಿಗೆ ಗಾಯ