ಮನೆ ಮನರಂಜನೆ “ಶಕಲಕ ಬೂಂ ಬೂಂ” ಚಿತ್ರ ವಿಮರ್ಶೆ

“ಶಕಲಕ ಬೂಂ ಬೂಂ” ಚಿತ್ರ ವಿಮರ್ಶೆ

0

ತುಳು ಚಿತ್ರರಂಗಕ್ಕೆ ವಿಭಿನ್ನವಾದ ಕಥಾ ಹಂದರದೊಂದಿಗೆ ಮೂಡಿ ಬಂದು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ “ಶಕಲಕ ಬೂಂ ಬೂಂ”.

ಏಕತಾನತೆಗೆ ಶರಣಾಗದೆ ವಿಭಿನ್ನತೆಗೆ ಒತ್ತು ನೀಡಿ ರಚಿಸಿದ ಅದ್ಭುತವಾದ ಕಾಮಿಡಿ ಹಾರರ್, ತ್ರಿಲ್ಲರ್ ಸಸ್ಪೆನ್ಸ್ ಚಿತ್ರ ಐಷಾರಾಮಿ ಜೀವನ ನಡೆಸಲು, ಸುಲಭವಾಗಿ ಧನ ಸಂಪಾದಿಸಲು ಅಡ್ಡದಾರಿ ಹಿಡಿದ 5 ಜನ ಒಂದು ಸಂದೇಶದ ಮುಖೇನ ಪುರಾತನವಾದ ಪಾಳು ಬಿದ್ದ ಮನೆಯಲ್ಲಿ ಬಂಧಿಗಳಾಗುತ್ತಾರೆ.

ಆ ಪಾಳು ಬಿದ್ದ ಮನೆಯಲ್ಲಿ ನಡೆಯುವ ಅಚಾತುರ್ಯಗಳು ವಿಚಿತ್ರವಾದ ದೃಷ್ಟಾಂತಗಳಿಂದ ಬೇಸತ್ತು ಅವರು ಮಂತ್ರವಾದಿಯನ್ನು ಕರೆದು ಇದರ ಸೂಕ್ಷ್ಮತೆ ಹಾಗೂ ನಿಜ ವಿಚಾರ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.

ಆ ಪಾಳು ಬಿದ್ದ ಮನೆಯಲ್ಲಿ ನಡೆದ ವಿಪರ್ಯಾಸಗಳು ಘಟನೆಗಳೇನು? ಮನೆಯ ಮೂಲ ಕಥೆ ಏನು? ಅಲ್ಲಿ ಏನಾಗಿರಬಹುದು? ಎಂಬ ವಿಶಿಷ್ಟವಾದ ಕಥಾನಕ ಹೊಂದಿರುವ ತುಳುವಿನಲ್ಲಿ ಕಾಮಿಡಿಯೊಂದಿಗೆ ಇತರ ವಿಚಾರಗಳನ್ನು ಮಿಶ್ರಗೊಳಿಸಿ ಎಲ್ಲಾ ವಯೋಮಾನದವರನ್ನು, ವಿವಿಧ ಸ್ಥರದ ಪ್ರೇಕ್ಷಕರನ್ನು ಸೆಳೆಯುವ ಹಾಗೂ ಜನರಿಗೆ,ರಂಜನೆಯೊಂದಿಗೆ ಸಂದೇಶ ನೀತಿ ಪ್ರೀತಿ, ಬಾಂದವ್ಯ, ಸತ್ಯಾಸತ್ಯತೆ, ಮೋಸ, ವಂಚನೆ, ಅಸಹಾಯಕತೆಯ ಎಡಗೆ ಬೆಳಕು ಚೆಲ್ಲಿ ಉಡುಪಿಯ 150 ವರ್ಷಗಳ ಹಳೆಯ ಮನೆ ಹಾಗೂ ಸುತ್ತಮುತ್ತಲು, ಚಿಕ್ಕಮಗಳೂರು, ಕುದುರೆಮುಖ ದಂತಹ ಸುಂದರವಾದ ಪರಿಸರದಲ್ಲಿ ಚಿತ್ರೀಕರಿಸಿ ಚಿತ್ರ ರಂಗದಲ್ಲಿ ಬದಲಾವಣೆಯ ಪರ್ವವನ್ನು ಬರೆಯಲು ಹೊರಡಿರುವರು ಯುವ ನಿರ್ದೇಶಕ ಶ್ರೀಶ ಎಳ್ಳಾರೆಯವರು.

ಜನವರಿ 20 ರಂದು ತೆರೆಕಂಡಿರುವ ಈ ಚಿತ್ರ ಜನಮಾನಸದಲ್ಲಿ ಅಚ್ಚಾಗಿ ಉಳಿಯುದರಲ್ಲಿ ಎರಡು ಮಾತಿಲ್ಲ. ಈ ತಂಡದ ಹೊಸ ಸಾಹಸಕ್ಕೆ ನಮ್ಮ ಪ್ರೋತ್ಸಾಹ ಸಹಕಾರ ಅಗತ್ಯ.

ಹಿಂದಿನ ಲೇಖನಮೈಸೂರು: 15 ದಿನದೊಳಗೆ ಕಬ್ಬು ಕಟಾವಿಗೆ ಜಿಲ್ಲಾಧಿಕಾರಿ ಸೂಚನೆ
ಮುಂದಿನ ಲೇಖನಐಸಿಸಿ ವರ್ಷದ ಟಿ20 ತಂಡ ಪ್ರಕಟ: ಮೂವರು ಭಾರತೀಯರಿಗೆ ಸ್ಥಾನ