ಒಬ್ಬ ಚಿಕ್ಕ ಹುಡುಗಿಯು ಅಮೆರಿಕಾದ ಅಧ್ಯಕ್ಷರಾದ ಅಬ್ರಾಹಂ ಲಿಂಕನ್ ಬಗ್ಗೆ ಅಧ್ಯಯನ ಮಾಡುತ್ತಿದ್ದಳು. ಅವರು ಹೇಗೆ ಕಾಣುತ್ತಾರೆಂದು ಕುತೂಹಲದಿಂದ ತನ್ನ ತಂದೆಯನ್ನು ಕೇಳಿದಳು. “ಮಗೂ ಲಿಂಕನ್ ನೋಡಲು ಚೆನ್ನಾಗಿಲ್ಲ” ಎಂದು ತಂದೆ ಹೇಳಿದರು.ಅಂದಿನಿಂದ ಅವಳು ಆ ಭಾವನೆಯನ್ನು ಹೊಂದಿದಳು. ಆದರೆ ದಿನಪತ್ರಿಕೆಗಳಲ್ಲಿ ಅವರ ಕುರಿತು ಬರೆದಿದ್ದನ್ನು ನೋಡಿ ಬಹಳ ಮೆಚ್ಚಿದಳು. ಅವಳ ಒತ್ತಾಯದ ಮೇರೆಗೆ ಒಂದು ದಿನ ಅವಳನ್ನು ಅವಳ ತಂದೆ ಶ್ವೇತ ಭವನಕ್ಕೆ ಕರೆದೊಯ್ಕರು ಲಿಂಕನ್ ಅವಳನ್ನು ತಮ್ಮ ತೊಡೆಯ ಮೇಲೆ ಕುಳ್ಳರಿಸಿ ತಮ್ಮ ಎಂದಿನ ಸೌಮ್ಯ ಹಾಗೂ ಹಾಸ್ಯ ರೀತಿಯಲ್ಲಿ ಸ್ವಲ್ಪ ಕಾಲದವರೆಗೆ ಅವಳ ಜೊತೆ ಮಾತನಾಡಿದರು. ಹಠಾತ್ತನೆ ಅವಳು ತನ್ನ ತಂದೆಯನ್ನು ಕೂಗಿದಳು. ಅವರಿಗೆ ಏನೋ ಹೇಳಿದಳು.
ಪ್ರಶ್ನೆಗಳು :
1. ಮಗಳು ತಂದೆಗೆ ಏನು ಹೇಳಿದಳು
2. ಈ ಕಥೆಯ ನೀತಿಯೇನು
ಉತ್ತರಗಳು :
1. ಹುಡುಗಿ ಅಪ್ಪನನ್ನು ಕರೆದು “ಅಪ್ಪಾ, ಇಲ್ಲಿಯವರೆಗೆ ನೋಡಿರುವವರ ಪೈಕಿ” ಇವರೇ ಅತ್ಯಂತ ಸುಂದರ ವ್ಯಕ್ತಿ ಎಂದಳು.
2. ಇಬ್ಬರೂ ವ್ಯಕ್ತಿಗಳ ನಡುವಿನ ಎಲ್ಲಾ ಅಂತರಗಳು ಆ ವ್ಯಕ್ತಿಯ ಕಾರ್ಯ ಹಾಗೂ ಸ್ವಭಾವದಿಂದ ತೊಡೆದು ಹೋಗುತ್ತದೆ.
ಒಂದು ಅಮೋಘ ವ್ಯಕ್ತಿತ್ವವು ತನ್ನ ಬಾಹ್ಯರೂಪವನ್ನು ಮೀರುತ್ತದೆ. ನಾವೆಲ್ಲಾ ಒಬ್ಬ ವ್ಯಕ್ತಿಯಲ್ಲಿ ಇದನ್ನು ಮೌಲ್ಯೀಕರಿಸುವುದನ್ನ ಕಲಿಯಬೇಕು. ವ್ಯಕ್ತಿ ಸುಂದರವಾಗಿರುವುದು ನೋಟದಿಂದಲ್ಲ, ಆತ ಮಾಡುವ ಒಳ್ಳೆಯ ಗುಣ ಹಾಗೂ ಕಾರ್ಯದಿಂದ ಸುಂದರನೇನು ಮಾಡುವುದೋ ಅದನ್ನು ಸುಂದರವೆನ್ನುತ್ತೇವೆ.