ಮನೆ ಅಪರಾಧ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಅವ್ಯವಹಾರ ಪ್ರಕರಣ: ರಾಜೇಶ್ ವಿ.ಆರ್

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಅವ್ಯವಹಾರ ಪ್ರಕರಣ: ರಾಜೇಶ್ ವಿ.ಆರ್

0

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರಾಜೇಶ್ ವಿ.ಆರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಕಾರಿಗಳು ಬಂಧಿಸಿದ್ದಾರೆ.

ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಸಾರ್ವಜನಿಕ ಠೇವಣಿಗಳ ದುರ್ಬಳಕೆ ಆರೋಪ ಸಂಬಂಧ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಅಕ್ರಮ ಪ್ರಕರಣಕ್ಕೆ ಕುರಿತಂತೆ ಆರ್‌ಬಿಐನ ತಪಾಸಣಾ ವರದಿ ಬಂದಿದ್ದು, ಈ ವರದಿ ಪ್ರಕಾರ, ಬ್ಯಾಂಕ್​ನಿಂದ ಹೊರತೆಗೆಯಲಾದ ನಿಧಿಯ ಪ್ರಮುಖ ಫಲಾನುಭವಿ ರಾಜೇಶ್ ವಿಆರ್ ಆಗಿದ್ದಾರೆ. ಬ್ಯಾಂಕ್‌ನಿಂದ 40 ಕೋಟಿ ರೂಪಾಯಿಗಳಷ್ಟು ಸಾಲ ಪಡೆದಿದ್ದಾರೆ. ಆದರೆ, ಅದನ್ನು ಮರುಪಾವತಿ ಮಾಡಿಲ್ಲ ಎಂದು ಆರೋಪಿಸಲಾಗಿದೆ.

ಅಲ್ಲದೇ, ಇತರ ಸಹಕಾರಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿದ ಆರೋಪ ಪ್ರಕರಣಗಳಲ್ಲೂ ರಾಜೇಶ್ ವಿ.ಆರ್ ಮತ್ತವರ ಪತ್ನಿ ವಿರುದ್ಧ ಅನೇಕ ಎಫ್‌ಐಆರ್‌ ದಾಖಲಾಗಿವೆ ಎಂಬುದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.

ಇನ್ನು, ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಜನರಿಂದ ಹಣ ಠೇವಣಿ ಮಾಡಿಕೊಂಡು ವಂಚಿಸಿದ ಆರೋಪ ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಮೇಲಿದೆ.

ಹಿಂದಿನ ಲೇಖನತನ್ನ ತೀರ್ಪುಗಳಿಗೆ ತಟಸ್ಥ ಉಲ್ಲೇಖ ವ್ಯವಸ್ಥೆ ಜಾರಿಗೆ ತಂದ ಸುಪ್ರೀಂ ಕೋರ್ಟ್
ಮುಂದಿನ ಲೇಖನಕರ್ನಾಟಕವನ್ನು ದಕ್ಷಿಣ ಭಾರತದಲ್ಲಿ ನಂಬರ್ ಒನ್ ಮಾಡುತ್ತೇವೆ: ಅಮಿತ್ ಶಾ