ಮನೆ ಮನರಂಜನೆ ಸೆ.30 ರಂದು ತೋತಾಪುರಿ ಸಿನಿಮಾ ರಿಲೀಸ್‌

ಸೆ.30 ರಂದು ತೋತಾಪುರಿ ಸಿನಿಮಾ ರಿಲೀಸ್‌

0

ಬೆಂಗಳೂರು (Bengaluru): ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ‘ತೋತಾಪುರಿʼ ಸಿನಿಮಾದ ಚಿತ್ರತಂಡ ಪೋಸ್ಟರ್‌ ಬಿಡುಗಡೆ ಮಾಡಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಸೆ. 30 ರಂದು ಸಿನಿಮಾ ತೆರೆಗೆ ಬರಲಿದೆ.

ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡು ಕೂಡಾ ವೈರಲ್‌ ಆಗಿದೆ. ಮೊದಲ ಭಾಗಕ್ಕೆ ‘ತೊಟ್ಟ್‌ ಕೀಳ್ಬೇಕಷ್ಟೇ’ ಎಂಬ ಟ್ಯಾಗ್‌ಲೈನ್‌ ನೀಡಿರುವ ನಿರ್ದೇಶಕರು, ಎರಡನೇ ಭಾಗಕ್ಕೆ ‘ತೊಟ್ಟ್‌ ಕಿತ್ತಾಯ್ತು’ ಎಂಬ ಅಡಿಬರಹ ನೀಡಿದ್ದಾರೆ.

ನವರಸನಾಯಕ ಜಗ್ಗೇಶ್‌ ಹಾಗೂ ವಿಜಯ್‌ ಪ್ರಸಾದ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದ್ದು, ತುಂಟತನ, ಪೋಲಿತನದ ಜೊತೆಗೆ ಭಾವೈಕ್ಯದ ಕಥೆಯನ್ನು ತೋತಾಪುರಿ ಹೊಂದಿದೆ. ಜಗ್ಗೇಶ್‌ ಹಾಗೂ ವಿಜಯ್‌ಪ್ರಸಾದ್‌ ಅವರ ‘ನೀರ್‌ದೋಸೆ’ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ‘ನೀರ್‌ದೋಸೆ’ಯಲ್ಲಿ ಶವದ ವಾಹನದ ಚಾಲಕನಾಗಿ ಕಾಣಿಸಿಕೊಂಡಿದ್ದ ಜಗ್ಗೇಶ್‌ ಅವರು ‘ತೋತಾಪುರಿ’ಯಲ್ಲಿ ಟೈಲರ್‌ ಈರೇಗೌಡ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

ಅದಿತಿ ಪ್ರಭುದೇವ ನಾಯಕಿಯಾಗಿ ಜಗ್ಗೇಶ್‌ಗೆ ಇಲ್ಲಿ ಜೋಡಿಯಾಗಿದ್ದಾರೆ. ‘ಡಾಲಿ’ ಧನಂಜಯ್‌ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದತ್ತಣ್ಣ ಕೂಡಾ ತಾರಾಗಣದಲ್ಲಿದ್ದಾರೆ.

ಹಿಂದಿನ ಲೇಖನಕೊಡಗು ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ: ನಾಳೆ ಶಾಲೆಗಳಿಗೆ ರಜೆ
ಮುಂದಿನ ಲೇಖನಆ.7 ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ