ಮನೆ ರಾಷ್ಟ್ರೀಯ ಗಾಯಕ ದಲೇರ್‌ ಮೆಹೆಂದಿಗೆ 2 ವರ್ಷ ಜೈಲು ಶಿಕ್ಷೆ

ಗಾಯಕ ದಲೇರ್‌ ಮೆಹೆಂದಿಗೆ 2 ವರ್ಷ ಜೈಲು ಶಿಕ್ಷೆ

0

ನವದೆಹಲಿ (New Delhi): 2003ರ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿ ಗಾಯಕ ದಲೇರ್ ಮೆಹೆಂದಿಯನ್ನು ಅಪರಾಧಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಪಟಿಯಾಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

15 ವರ್ಷಗಳ ನಂತರ ಆದೇಶವನ್ನು ಪ್ರಕಟಿಸಿದ ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್.ಗ್ರೆವಾಲ್ ಗಾಯಕನನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದರು.

ಪಂಜಾಬಿ ಗಾಯಕ ದಲೇರ್ ಮೆಹೆಂದಿಗೆ ಅವರ 15 ವರ್ಷಗಳಷ್ಟು ಹಳೆಯ ಮಾನವ ಕಳ್ಳಸಾಗಣೆ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಗಾಯಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಪಟಿಯಾಲದ ಜಿಲ್ಲಾ ನ್ಯಾಯಾಲಯವು 2003ರ ಹಿಂದಿನ ಅಕ್ರಮ ವಲಸೆ ದಂಧೆ ಪ್ರಕರಣದಲ್ಲಿ ಪಂಜಾಬಿ ಗಾಯಕ ಫಲೇರ್ ಮೆಹಂದಿ ಶಿಕ್ಷೆಯನ್ನು ಎತ್ತಿಹಿಡಿದಿದೆ.

ಪ್ರಕರಣವು 2003 ರ ಹಿಂದಿನದು ಮತ್ತು ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳನ್ನು ದಾಖಲಿಸಲಾಗಿದೆ.

ಹಿಂದಿನ ಲೇಖನಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನ ವರ್ಗಾವಣೆ ಮಾಡಿದ ಸಿಎಂ ಬೊಮ್ಮಾಯಿ
ಮುಂದಿನ ಲೇಖನಶ್ರೀ ಸಪ್ತಶ್ಲೋಕೀ ದುರ್ಗಾ ಸ್ತೋತ್ರ