ಮನೆ ಅಪರಾಧ ಜೀಪ್ ನಿಂದ ಗುದ್ದಿ ತಾಯಿಯನ್ನೇ ಹತ್ಯ ಮಾಡಿದ ಮಗ

ಜೀಪ್ ನಿಂದ ಗುದ್ದಿ ತಾಯಿಯನ್ನೇ ಹತ್ಯ ಮಾಡಿದ ಮಗ

0

ಮೈಸೂರು: ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯ ಕಾರಣದಿಂದಾಗಿ ಮಗನೇ  ತಾಯಿಗೆ ಜೀಪ್ ನಿಂದ ಗುದ್ದಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ  ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ನಡೆದಿದೆ.

ನಾಗಮ್ಮ(65) ಹತ್ಯೆಯಾದ ತಾಯಿ. ಹೇಮರಾಜ್(45) ಎಂಬಾತನೇ ಈ ಕೃತ್ಯವೆಸಗಿರುವ ಪುತ್ರ. ಹಣಕಾಸಿನ ವಿಚಾರಕ್ಕೆ ತಾಯಿ ಮಗನ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಇಂದು ತಾಯಿಯ ವಿರುದ್ಧ ಕುಪಿತಗೊಂಡಿದ್ದ ಮಗ ಹೇಮರಾಜ್, ರಸ್ತೆ ಬದಿಯಲ್ಲಿ ತೆರಳುತ್ತಿದ್ದ ತಾಯಿ ನಾಗಮ್ಮಗೆ ಟ್ರಾವೆಲ್ ಜೀಪ್ ನಿಂದ ಡಿಕ್ಕಿಹೊಡೆಸಿ ಕೊಂದಿದ್ದಾನೆ.

ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ತಾಯಿ ನಾಗಮ್ಮ ಮೃತಪಟ್ಟಿದ್ದಾರೆ. ಬೆಟ್ಟದ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ಹೇಮರಾಜನನ್ನು ಬೆಟ್ಟದಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗೆ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.