ಮನೆ ಸುದ್ದಿ ಜಾಲ ಹಾಲಿ ನಿರ್ವಹಿಸುತ್ತಿದ್ದ ಹುದ್ದೆಯಿಂದ 7 ಕೆಎಎಸ್ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರಕಾರದ ಆದೇಶ

ಹಾಲಿ ನಿರ್ವಹಿಸುತ್ತಿದ್ದ ಹುದ್ದೆಯಿಂದ 7 ಕೆಎಎಸ್ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರಕಾರದ ಆದೇಶ

0

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ 30.01.2021 ರಂದು ಪ್ರಕಟಿಸಿರುವ ಪುನರ್ ಪರಿಷ್ಕೃತ ಆಯ್ಕೆಪಟ್ಟಿ ಅನ್ವಯ ಹುದ್ದೆ ಬದಲಾವಣೆಗೊಂಡಿರುವ ಕರ್ನಾಟಕ ಆಡಳಿತ ಸೇವಾ ವೃಂದದ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರಕಾರದ ಸರಕಾರದ ಅಧೀನ ಕಾರ್ಯದರ್ಶಿ ಎಚ್.ಕೆ.ಶಾಂತರಾಜು ಆದೇಶ ಹೊರಡಿಸಿದ್ದಾರೆ.

ಸರಕಾರದ ನಾನಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್ ಹಿರಿಯ ಶೇಣಿ ಅಧಿಕಾರಿಗಳಾದ ರೇಖಾ ಟಿ, ರಶ್ಮಿ ಜಿ, ಶಾರದ ಕೋಲಕಾರ, ಮಂಜುನಾಥ್ ಜಿ.ಎನ್, ಮಹಾದೇವ ಎ ಮುರಗಿ, ನಾಗಹನುಮಯ್ಯ ಜಿ.ಎಚ್, ಇಸ್ಮಾಯಿಲ್ ಸಾಬ್ ಶಿರಹಟ್ಟಿ ಅವರು 1998ನೇ ಸಾಲಿನ ಪ್ರೋಬೇಷನರಿ ಪುರಸ್ಕೃತ ಆಯ್ಕೆಪಟ್ಟಿ ಅನ್ವಯ ಆಯ್ಕೆಯಾಗಿರುವ ಆಡಳಿತ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರ ಸೂಚನೆ ನೀಡಿದೆ.

ಮೇಲಿನ ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿಗಳನ್ನು ದಾಖಲಿಸಿದ್ದರು. ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯಿಂದ ಆದೇಶ ಪಡೆದು ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರೆದಿದ್ದರು. ಪ್ರಸ್ತುತ ನ್ಯಾಯ ಮಂಡಳಿ ಸದರಿ ಪ್ರಕರಣಗಳನ್ನು ವಜಾಗೊಳಿಸುತ್ತದೆ. ಹೀಗಾಗಿ 30.01 021ರ ಪವರ್ ಪರಿಷ್ಕೃತ ಆಯ್ಕೆ ಪಟ್ಟಿ ಹಾಲಿ ನಿರ್ವಹಿಸುತ್ತಿದ್ದ ಹುದ್ದೆಯಿಂದ ಬಿಡುಗಡೆಗೊಳಿಸಿ ಬದಲಾದ ಹುದೆಯಲ್ಲಿ ಕಾರ್ಯ ವರದಿ ಮಾಡಿಕೊಳ್ಳಲು ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಹಿಂದಿನ ಲೇಖನರಿಂಗ್ ರೋಡ್ ನಲ್ಲಿರುವ ಫ್ಲೆಕ್ಸ್ ತೆಗೆಸಿ: ಪ್ರತಾಪ್ ಸಿಂಹ
ಮುಂದಿನ ಲೇಖನಚಿನ್ನ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು