ಮನೆ ಕಾನೂನು ಲೈಂಗಿಕ ಕಾರ್ಯಕರ್ತರಿಗೂ ಆಧಾರ್‌ ಕಾರ್ಡ್‌ ನೀಡಿ: ಸುಪ್ರೀಂ ಕೋರ್ಟ್‌

ಲೈಂಗಿಕ ಕಾರ್ಯಕರ್ತರಿಗೂ ಆಧಾರ್‌ ಕಾರ್ಡ್‌ ನೀಡಿ: ಸುಪ್ರೀಂ ಕೋರ್ಟ್‌

0

ನವದೆಹಲಿ(New Delhi)-ಲೈಂಗಿಕ ಕಾರ್ಯಕರ್ತರಿಗೂ ಆಧಾರ್ (Aadhaar Card) ಗುರುತಿನ ಚೀಟಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ನಿರ್ದೇಶನ ನೀಡಿದೆ.

ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವದಿಂದ ಕಾಣಬೇಕಿರುವುದು ಆ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರಿದ್ದ ಪೀಠವು, ಲೈಂಗಿಕ ಕಾರ್ಯಕರ್ತರ ಲಿಂಗದ ಗೋಪ್ಯತೆಯನ್ನು ಉಲ್ಲಂಘಿಸಬಾರದು. ಅವರ ಗುರುತನ್ನು ಬಹಿರಂಗಪಡಿಸಬಾರದು ಎಂದು ಹೇಳಿದೆ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ನ್ಯಾಕೊ) ಅಥವಾ ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನೆ ನಿರ್ದೇಶಕರು ಸಲ್ಲಿಸಿದ ಆಧಾರದಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ನೀಡಬಹುದು. ವ್ಯಕ್ತಿ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿ, ಆ ವ್ಯಕ್ತಿಗೆ ಗೌರವ ನೀಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ತಿಳಿಸಿದೆ.

ಇದಕ್ಕೂ ಮುನ್ನ ಯಾವುದೇ ಗುರುತಿನ ಆಧಾರವಿಲ್ಲದೆ ನ್ಯಾಕೊ ಅಥವಾ ಆರೋಗ್ಯ ಇಲಾಖೆಯ ಗೆಜೆಟೆಡ್ ಅಧಿಕಾರಿಗಳು ನೀಡಿದ ಪ್ರಮಾಣ ಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ಗೆ ಯುಐಡಿಎಐ ತಿಳಿಸಿತ್ತು.

ಹಿಂದಿನ ಲೇಖನಜಿಎಸ್‌ಟಿ ಮಂಡಳಿಯ ಶಿಫಾರಸುಗಳ ಪಾಲನೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್‌
ಮುಂದಿನ ಲೇಖನಮತಾಂತರ ನಿಷೇಧ ಕಾಯ್ದೆಯನ್ನು ಸ್ವಾಗತಿಸಿದ ಪೇಜಾವರ ಶ್ರೀ