ಮನೆ ಸುದ್ದಿ ಜಾಲ ಸ್ವಾಮಿ ವಿವೇಕಾನಂದರ ಬದುಕಿನ ಪಥ ಯುವಜನರಿಗೆ ಬೆಳಕು: ಪದ್ಮಾವತಿ

ಸ್ವಾಮಿ ವಿವೇಕಾನಂದರ ಬದುಕಿನ ಪಥ ಯುವಜನರಿಗೆ ಬೆಳಕು: ಪದ್ಮಾವತಿ

0

ಮೈಸೂರು: ವಿವೇಕಾನಂದರ ಮಾತುಗಳು ಮತ್ತು ಅವರ ಬದುಕಿನ ಪಥ ಇಂದಿನ ಯುವ ಜನಾಂಗಕ್ಕೆ ಬೆಳಕಾಗಿದೆ ಎಂದು ಶ್ರೀ ಕಾವೇರಿ  ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ  ಅಭಿಪ್ರಾಯಪಟ್ಟರು.

ಕುವೆಂಪುನಗರದಲ್ಲಿರುವ ಶ್ರೀ ಕಾವೇರಿ  ಪ್ರಥಮ ದರ್ಜೆ ಕಾಲೇಜಿನಲ್ಲಿ ಜೀವಧಾರ ರಕ್ತನಿಧಿ ಸಹಯೋಗದೊಂಗಿದೆ  ಶುಕ್ರವಾರ  ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆ ನಿರ್ಮಿಸುವುದೇ ನನ್ನ ಗುರಿ ಎಂದು ಹೇಳಿದ್ದ ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಕ ಶಕ್ತಿಯಾಗಬೇಕು. ವಿವೇಕಾನಂದರು ಸಾಮಾಜ ಸುಧಾರಣೆ, ನಾಯಕತ್ವ ಮನೋಭಾವ ಮತ್ತು ಮಾನಸಿಕ ಸ್ಥೈರ್ಯ ಸಂದೇಶವನ್ನು ಯುವ ಪೀಳಿಗೆಗೆ ನೀಡಿದ್ದಾರೆ. ದೇಶ ಸಂಪೂರ್ಣವಾಗಿ ಅಭಿವೃದ್ಧಿ ಆಗಬೇಕಾದರೆ, ಯುವಜನತೆ ಪಾತ್ರ ಹಿರಿದಾಗಿದೆ ಎಂದರು.

ರಕ್ತದಾನ ಶಿಬಿರದಲ್ಲಿ 54 ಜನ ಯುವಕ ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಸೇನಾ ಮುಖ್ಯಸ್ಥರಾದ ಅಯ್ಯಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ರೆಡ್ ಕ್ರಾಸ್ ಸಂಪರ್ಕಾಧಿಕಾರಿ ಚೈತ್ರಾ ,ಡಾ॥ಕೃತಿಕಾ, ಸುರೇಶ್, ಕಾಲೇಜಿನ ಸಹ ಪ್ರಾಧ್ಯಾಪಕರು ಸುಹೇಲ್, ಸುನೀಲ್, ಕೌಶಲ್ಯ, ರಶ್ಮಿತಾ , ರಾರಿಶ, ಸೋನಾಕ್ಷಿ , ನಾಗಭೂಷಣ್ ಹಾಗೂ ಇನ್ನಿತರರು ಹಾಜರಿದ್ದರು

ಹಿಂದಿನ ಲೇಖನದೆಹಲಿ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆ
ಮುಂದಿನ ಲೇಖನವಿಕ್ಟೊರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಸಿದ್ಧತೆ ಪರಿಶೀಲನೆ